ಮುಂಬೈ: ಶಿವ ಸೇನೆಯ ನಿಷ್ಠಾವಂತ ನಾಯಕ ಮತ್ತು ಮಾಜಿ ಶಾಸಕ ದಗ್ಡು ಸಕ್ಪಾಲ್ ಅವರು ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷವನ್ನು ಭಾನುವಾರ ಸೇರಿದ್ದಾರೆ.

‘ಬಾಳಾಸಾಹೇಬ್ ಠಾಕ್ರೆ ಅವರ ಆಪ್ತ ಸಹಚರರು ಮತ್ತು ನಿಷ್ಠಾವಂತ ಶಿವ ಸೇನೆ ಕಾರ್ಯಕರ್ತರನ್ನು ಕೆಲವರು ಸೇವಕರಂತೆ ನಡೆಸಿಕೊಳ್ಳುತ್ತಿದ್ದಾರೆ. ಪಕ್ಷಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ದಗ್ಡು ಸಕ್ಪಾಲ್ ಅವರಂತಹ ಕಾರ್ಯಕರ್ತರಿಗೆ ಸೂಕ್ತ ಗೌರವ ನೀಡದೆ, ನಿರ್ಲಕ್ಷಿಸಿದ್ದು ದುರದೃಷ್ಟಕರ’ ಎಂದು ಉಪ ಮುಖ್ಯಮಂತ್ರಿ ಮತ್ತು ಶಿವಸೇನಾ ಮುಖ್ಯಸ್ಥ ಏಕನಾಥ ಶಿಂದೆ ಅವರು ಶಿವ ಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಘಾಟ್ಕೋಪರ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಪ್ಕಾಲ್ ಅವರು, ‘ಶಿಂಧೆ ಅವರು ಒಂದು ದಿನ ದೊಡ್ಡ ನಾಯಕರಾಗುತ್ತಾರೆ’ ಎಂದು ಹೇಳಿದರು.

ಶಿವ ಸೇನೆ (ಯುಬಿಟಿ) ತನ್ನ ಮಗನಿಗೆ ಟಿಕೆಟ್ ನಿರಾಕರಿಸಿದ್ದು, ಸಕ್ಪಾಲ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಮುಂಬೈನ ಪರೇಲ್ ಪ್ರದೇಶದಲ್ಲಿ ಸಕ್ಪಾಲ್ ಅವರು ಎರಡು ಬಾರಿ ಶಾಸಕರಾಗಿದ್ದರು. ಶಿವ ಸೇನೆಯ ಪ್ರಮುಖ ಸಂಘಟನಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.