ನವದೆಹಲಿ: ಗಡಿಯಾಚೆಗಿನ ಭಯೋತ್ಪಾದನೆ ಕೃತ್ಯಗಳನ್ನು ಎದುರಿಸಲು ಸೇನೆಯನ್ನು ಸಜ್ಜಾಗಿಸುವ ಕ್ರಮವಾಗಿ ರಕ್ಷಣಾ ಸಚಿವಾಲಯ ಮಂಗಳವಾರ, ₹1980 ಕೋಟಿ ಮೌಲ್ಯದ ರಕ್ಷಣಾ ಪರಿಕರಗಳ ಖರೀದಿಸುವ 13 ಒಪ್ಪಂದಗಳಿಗೆ ಅನುಮೋದನೆ ನೀಡಿದೆ.

ಆಧುನಿಕ ಸಮಗ್ರ ಡ್ರೋನ್ ಪತ್ತೆ ಮತ್ತು ಪ್ರತಿಬಂಧಕ ವ್ಯವಸ್ಥೆಯೂ ಸೇರಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಬೆದರಿಕೆಗಳಿದ್ದು, ಸೇನೆಯು ಇದನ್ನು ಸಮರ್ಥವಾಗಿ ಎದುರಿಸುತ್ತಿದೆ.

ಕಡಿಮೆ ಎತ್ತರದಲ್ಲಿ ಕಾರ್ಯಾಚರಣೆಯನ್ನು ನಡೆಸಬಹುದಾದ ಹಗುರ ರಾಡಾರ್ಗಳು, ಅಲ್ಪ ಅಂತರ ವ್ಯಾಪ್ತಿಯ ವಾಯುಗಡಿ ರಕ್ಷಣೆಯ ಕ್ಷಿಪಣಿಗಳು, ಲಾಂಚರ್ಗಳು, ದೂರ ನಿಯಂತ್ರಿತ ವೈಮಾನಿಕ ವಾಹನ, ಲಂಬಮುಖಿಯಾಗಿ ಏರುವ, ಇಳಿಯಬಹುದಾದ ವೈಮಾನಿಕ ವಾಹನ, ಹಲವು ನಮೂನೆಯ ಡ್ರೋನ್ಗಳು, ಗುಂಡುನಿರೋಧಕ ಜಾಕೆಟ್ಗಳು, ಹೆಲ್ಮೆಟ್ಗಳು ಈಗ ಖರೀದಿಸಲಾಗುವ ಯುದ್ಧ ಪರಿಕರಗಳಲ್ಲಿ ಸೇರಿವೆ.

ಗಣನೀಯ ಬೆಳವಣಿಗೆಯಲ್ಲಿ 1,981 ಕೋಟಿ ಮೌಲ್ಯದ ಯುದ್ಧ ಸಾಮಗ್ರಿಗಳು, ಶಸ್ತ್ರಾಸ್ತ್ರಗಳ ಖರೀದಿಯ 13 ಒಪ್ಪಂದಗಳಿಗೆ ಅನುಮೋದನೆ ನೀಡಲಾಯಿತು ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಆದೇಶ: ಸೇನಾ ಮುಖ್ಯಸ್ಥರಿಗೆ ಪೂರ್ಣ ಅಧಿಕಾರ

ನವದೆಹಲಿ: ಸೇನೆಯ ಮೂರೂ ಪಡೆಗಳಿಗೆ ಆದೇಶ ನೀಡುವ ಪೂರ್ಣ ಅಧಿಕಾರವನ್ನು ಸೇನಾಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ್ದಾರೆ. ಹಿಂದೆ ಅಯಾ ಪಡೆಗಳ ಮುಖ್ಯಸ್ಥರು ಪ್ರತ್ಯೇಕವಾಗಿ ಅದೇಶ ನೀಡುತ್ತಿದ್ದರು. ಸೇನೆ ನೌಕಾಪಡೆ ಮತ್ತು ವಾಯುಪಡೆಗಳ ನಡುವೆ ಉತ್ತಮ ಸಹಭಾಗಿತ್ವವನ್ನು ಸಾಧಿಸುವುದು ಇದರ ಉದ್ದೇಶ ಎಂದು ಹೇಳಲಾಗಿದೆ. ಪುನರಾವರ್ತನೆ ತಪ್ಪಿಸುವುದು ಏಕರೂಪತೆ ಹೊಂದುವುದು ಅಂತರ ಸೇವೆ ಸಹಕಾರದಲ್ಲಿ ಹೆಚ್ಚಿನ ಒತ್ತು ನೀಡುವ ಕುರಿತ ಮೊದಲ ಜಂಟಿ ಆದೇಶವನ್ನು ಮಂಗಳವಾರ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.