ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಾಹಿಕ ಕಲಹ ಪ್ರಕರಣ: ತ್ವರಿತ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್‌ ಸೂಚನೆ

Last Updated 18 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ:ವಿವಾಹ ಕಲಹಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ವಿಳಂಬವಾದಷ್ಟೂ ಮಕ್ಕಳ ಮೇಲೆ ಅದರ ದುಷ್ಪರಿಣಾಮ ಉಂಟಾಗುತ್ತದೆ. ಇಂತಹ ಪ್ರಕರಣಗಳನ್ನು ಆದಷ್ಟು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಹೇಳಿದೆ.

ಮಕ್ಕಳನ್ನು ಸುಪರ್ದಿಗೆ ಪಡೆಯುವ ಪೋಷಕರಕಾನೂನು ಹೋರಾಟದಲ್ಲಿ, ಯಾವುದೇ ತಪ್ಪು ಮಾಡದ ಮಕ್ಕಳು ಹೆಚ್ಚಿನ ಬೆಲೆ ತೆರುತ್ತಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

‘ಪೋಷಕರ ಈ ಹೋರಾಟದಲ್ಲಿ ಮಕ್ಕಳು ಪ್ರೀತಿ ಮತ್ತು ವಾತ್ಸಲ್ಯದಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳು ಅಪ್ಪ ಮತ್ತು ಅಮ್ಮ ಇಬ್ಬರ ಪ್ರೀತಿಗೂ ಅರ್ಹರಾಗಿದ್ದು, ವಿಚ್ಛೇದನ ತೆಗೆದುಕೊಂಡಾಕ್ಷಣ ಪೋಷಕರ ಜವಾಬ್ದಾರಿ ಮುಕ್ತಾಯವಾಗುವುದಿಲ್ಲ’ ಎಂದು ಹೇಳಿದೆ.

ಹಲವು ದಿನಗಳಿನಿಂದ ವೈವಾಹಿಕ ವಿವಾದದಲ್ಲಿ ಸಿಲುಕಿರುವ ದಂಪತಿಯ ಪ್ರಕರಣವನ್ನುನ್ಯಾಯಮೂರ್ತಿ ಎ.ಎಂ.ಖಾನ್‌ವಿಲ್ಕರ್ ಮತ್ತು ಅಜಯ್‌ ರಸ್ತೋಗಿ ಅವರ ಪೀಠ ವಿಚಾರಣೆ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT