ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಎಎಪಿ ಸೇರಿದ 120 ಮಂದಿ ವಕೀಲರು

Published 19 ಮಾರ್ಚ್ 2024, 16:38 IST
Last Updated 19 ಮಾರ್ಚ್ 2024, 16:38 IST
ಅಕ್ಷರ ಗಾತ್ರ

ನವದೆಹಲಿ: 120 ಮಂದಿ ವಕೀಲರು ಇಂದು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವನ್ನು(ಎಎಪಿ) ಸೇರಿದ್ದಾರೆ. ಕಾನೂನು ಸಚಿವೆ ಅತಿಶಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ಆದಾಗಲೆಲ್ಲ ಅವುಗಳನ್ನು ರಕ್ಷಿಸುವುದು ವಕೀಲರ ಕರ್ತವ್ಯವಾಗಿದೆ ಎಂದು ಅತಿಶಿ ಹೇಳಿದ್ದಾರೆ.

ಸ್ವತಂತ್ರ ತನಿಖಾ ಸಂಸ್ಥೆಗಳು ಕೊಲೆಗಡುಕರ ರೀತಿ ವರ್ತಿಸುತ್ತಿವೆ. ಚುನಾವಣಾ ಬಾಂಡ್ ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದ್ದು, ದೇಶದಾದ್ಯಂತ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು ಕುಸಿಯುತ್ತಿವೆ ಎಂದಿದ್ದಾರೆ.

ಎಎಪಿ ಸೇರಿದ ವಕೀಲರ ಪೈಕಿ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಬಾರ್ ಅಸೋಸಿಯೇಷನ್‌ನ ಮಾಜಿ ಕಾರ್ಯಕಾರಿ ಸದಸ್ಯರಾದ ಸುಷ್ಮಾ ತ್ಯಾಗಿ ಮತ್ತು ನೀಲಂ ಸಿಂಗ್ ಸೇರಿದ್ದಾರೆ.

ಅವರ ಜೊತೆ ದೆಹಲಿಯ ವಿವಿಧ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 118 ವಕೀಲರೂ ಪಕ್ಷ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT