ನವದೆಹಲಿ: ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಉಂಟಾಯಿತು. 300ಕ್ಕೂ ಅಧಿಕ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿದೆ ಎಂದು ಮೂಲಗಳು ತಿಳಿಸಿವೆ.
.ಹವಾಲ ಮೂಲಕ ದುಬೈನಲ್ಲಿ ಭಾರತೀಯರ ಅಕ್ರಮ ಆಸ್ತಿ : ದೆಹಲಿ, ಗೋವಾದಲ್ಲಿ ಇ.ಡಿ ದಾಳಿ.
ಏರ್ಪೋರ್ಟ್ನಲ್ಲಿ ವಿಮಾನಗಳ ಕಾರ್ಯಾಚರಣೆಗೆ ಅಡೆತಡೆ ಉಂಟಾಗಿದ್ದು, ಅದನ್ನು ಬಗೆಹರಿಸಲು ಅಧಿಕಾರಿಗಳು ಪ್ರಯತ್ನ ಪಡುತ್ತಿದ್ದಾರೆ.

ದೆಹಲಿ ಏರ್ಪೋರ್ಟ್ನಲ್ಲಿ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಿದ್ದರಿಂದ ವಿಮಾನಗಳ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಇಂಡಿಗೊ, ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ಪ್ರೆಸ್, ಸ್ಪೈಸ್ ಜೆಟ್ ಹಾಗೂ ಆಕಾಸ ಏರ್ ತಿಳಿಸಿದೆ.

ದೇಶದ ಅತ್ಯಂತ ದಟ್ಟಣೆ ಇರುವ ಏರ್ಪೋರ್ಟ್ ಇದಾಗಿದ್ದು, ನಿತ್ಯ 1,500 ವಿಮಾನಗಳು ಕಾರ್ಯಾಚರಣೆ ಮಾಡುತ್ತವೆ.
.ದೆಹಲಿ; ಕಾಣೆಯಾಗಿದ್ದ 75 ಮಂದಿಯನ್ನು ಕುಟುಂಬದ ಜೊತೆ ಸೇರಿಸಿದ ಪೊಲೀಸರು.
ವಾಯು ಸಂಚಾರ ನಿಯಂತ್ರಣ ದತ್ತಾಂಶಕ್ಕೆ ಸಹಾಯಕವಾಗಿರುವ ಸ್ವಯಂಚಾಲಿತ ಸಂದೇಶ ಬದಲಾವಣೆ ವ್ಯವಸ್ಥೆಯಲ್ಲಿ (Automatic Message Switching System) ತಾಂತ್ರಿಕ ದೋಷ ಉಂಟಾಗಿದ್ದರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ಇದನ್ನು ಬಗೆಹರಿಸಲು ತಂಡಗಳು ಕೆಲಸ ಮಾಡುತ್ತಿವೆ ಎಂದೂ ಅದು ಹೇಳಿದೆ.
.ದೆಹಲಿ ಝೂನಲ್ಲಿದ್ದ ಆಫ್ರಿಕಾ ಆನೆ ಸೋಂಕಿನಿಂದ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ದೃಢ.
ಬೋರ್ಡಿಂಗ್ ಗೇಟ್ ಬಳಿ ಪ್ರಯಾಣಿಕರ ದೊಡ್ಡ ಸಾಲೇ ಇದ್ದು, ನೂರಾರು ಪ್ರಯಾಣಿಕರು ವಿಮಾನಗಳ ಮಾಹಿತಿಗಾಗಿ ಏರ್ಪೋರ್ಟ್ ಟರ್ಮಿನಲ್ನಲ್ಲಿ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಂತ್ರಿಕ ದೋಷದಿಂದಾಗಿ ಸಂಚಾರ ನಿಯಂತ್ರಕರು ವಿಮಾನದ ಮಾಹಿತಿಗಳನ್ನು ಸ್ವಯಂಚಾಲಿತವಾಗಿ ಪಡೆದುಕೊಳ್ಳಲು ಆಗುತ್ತಿಲ್ಲ. ಗುರುವಾರ ಸಂಜೆಯಿಂದಲೇ ಈ ಸಮಸ್ಯೆ ಆರಂಭವಾಗಿದೆ.

ಸದ್ಯ ಸಂಚಾರ ನಿಯಂತ್ರಕರು ಈ ಕೆಲಸವನ್ನು ಸ್ವಯಂ ಮಾಡುತ್ತಿದ್ದು, ಇದು ಸಮಯ ತೆಗೆದುಕೊಳ್ಳುತ್ತಿದೆ. ಹೀಗಾಗಿ ವಿಮಾನಗಳ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
.ದೆಹಲಿ: ATCಯಲ್ಲಿ ತಾಂತ್ರಿಕ ದೋಷ; 100ಕ್ಕೂ ಹೆಚ್ಚು ವಿಮಾನ ಹಾರಾಟ ವಿಳಂಬ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.