ಗುವಾಹಟಿ: ದೆಹಲಿ ಸ್ಫೋಟದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬುಧವಾರ ಮತ್ತೆ 9 ಜನರನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ತಿಳಿಸಿದ್ದಾರೆ.

ರಾಫಿಜುಲ್ ಅಲಿ (ಬೊಂಗೈಗಾಂವ್), ಫೊರಿದ್ ಉದ್ದೀನ್ ಲಸ್ಕರ್ (ಹೈಲಕಂಡಿ), ಇನಾಮುಲ್ ಇಸ್ಲಾಂ (ಲಖೀಂಪುರ), ಫಿರೂಜ್ ಅಹ್ಮದ್ ಅಲಿಯಾಸ್ ಪಾಪೋನ್ (ಲಖಿಂಪುರ), ಶಾಹಿಲ್ ಶೋಮನ್ ಸಿಕ್ದರ್ ಅಲಿಯಾಸ್ ಶಾಹಿದುಲ್ ಇಸ್ಲಾಂ (ಬಾರ್ಪೇಟ), ರಕಿಮ್ಬುಲ್ ಇಸ್ಲಾಂ (ಬಾರ್ಪೇಟ), ರಕಿಮ್ಬುಲ್ತಾನ್, ತಸ್ಲೀಮ್ ಅಹ್ಮದ್ (ಕಾಮ್ರೂಪ್) ಮತ್ತು ಅಬ್ದುರ್ ರೋಹಿಮ್ ಮೊಲ್ಲಾ ಅಲಿಯಾಸ್ ಬಪ್ಪಿ ಹುಸೇನ್ (ದಕ್ಷಿಣ ಸಲ್ಮಾರಾ) ಬಂಧಿತರು.

ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡ 15 ಜನರನ್ನು ಬಂಧಿಸಲಾಗಿದೆ. ಹಿಂಸಾಚಾರವನ್ನು ವೈಭವೀಕರಿಸುವವರ ವಿರುದ್ಧ ಅಸ್ಸಾಂ ಪೊಲೀಸರು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಶರ್ಮಾ ಪ್ರತಿಪಾದಿಸಿದ್ದಾರೆ.

ಬಂಧಿತರ ಸಂಪರ್ಕಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಯಾರಾದರೂ ಬಾಂಗ್ಲಾದೇಶ ಅಥವಾ ಬೇರೆ ಯಾವುದೇ ದೇಶದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಕಂಡುಬಂದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದೂ ಸಿಎಂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.