ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿಯ ಕೋಚಿಂಗ್‌ ಸೆಂಟರ್‌ನಲ್ಲಿ ಮೂವರ ಸಾವು: ಸಹ ಮಾಲೀಕರಿಗೆ ಜಾಮೀನು ನಿರಾಕರಣೆ

Published : 23 ಆಗಸ್ಟ್ 2024, 13:10 IST
Last Updated : 23 ಆಗಸ್ಟ್ 2024, 13:10 IST
ಫಾಲೋ ಮಾಡಿ
Comments

ನವದೆಹಲಿ: ಕಳೆದ ತಿಂಗಳು ಕೋಚಿಂಗ್‌ ಸೆಂಟರ್‌ ಕಟ್ಟಡದ ನೆಲಮಾಳಿಗೆಯಲ್ಲಿ ಪ್ರವಾಹದ ನೀರಿನಲ್ಲಿ ಮುಳುಗಿ ಮೂವರು ನಾಗರಿಕ ಸೇವಾ ಪರೀಕ್ಷೆ ಆಕಾಂಕ್ಷಿಗಳು ಮೃತಪಟ್ಟ ಪ್ರಕರಣದಲ್ಲಿ ಬಂಧಿತರಾಗಿರುವ ನೆಲಮಾಳಿಗೆಯ ನಾಲ್ವರು ಸಹ ಮಾಲೀಕರ ಜಾಮೀನು ಅರ್ಜಿಯನ್ನು ದೆಹಲಿ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ.

ಜುಲೈ 27ರಂದು ಹಳೆ ರಾಜೀಂದ್ರ ನಗರದಲ್ಲಿನ ರಾವ್ ಐಎಎಸ್ ಸ್ಟಡಿ ಸರ್ಕಲ್‌ನಲ್ಲಿ ನಡೆದಿರುವ ಘಟನೆಯ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಎಲ್ಲಾ ಅಪರಾಧಿಗಳನ್ನು ಕಟಕಟೆಗೆ ತರಲಿ ಎಂದು ಕೋರ್ಟ್‌ ಆಶಿಸಿದೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಂಜು ಬಜಾಜ್ ಚಂದ್ನಾ ಅವರು ಬಂಧಿತ ಆರೋಪಿಗಳಾದ ಪರ್ವಿಂದರ್ ಸಿಂಗ್, ತಜೀಂದರ್ ಸಿಂಗ್, ಹರ್ವಿಂದರ್ ಸಿಂಗ್ ಮತ್ತು ಸರಬ್ಜಿತ್ ಸಿಂಗ್ ಅವರಿಗೆ ಜಾಮೀನು ನೀಡಲು ನಿರಾಕರಿಸಿದರು. ಆರೋಪಿಗಳು ಈ ಘಟನೆಗೆ ನಾವು ‘ವಿಶೇಷ ಜವಾಬ್ದಾರರಲ್ಲ’ವೆಂದು ನೀಡಿರುವ ಹೇಳಿಕೆಯನ್ನು ನ್ಯಾಯಾಧೀಶರು ಗಮನಿಸಿದರು. 

‘ಸಿಬಿಐ ತನಿಖೆ ಆರಂಭಿಕ ಹಂತದಲ್ಲಿದೆ. ಆರೋಪಿಗಳ ನಿರ್ದಿಷ್ಟ ಪಾತ್ರವನ್ನು ತನಿಖೆಯಲ್ಲಿ ಖಚಿತಪಡಿಸಿಕೊಳ್ಳಬೇಕಿದೆ. ಅಲ್ಲದೆ, ಕಟ್ಟಡದ ನಿಯಮಗಳ ಉಲ್ಲಂಘನೆ ಮತ್ತು ಒಳಚರಂಡಿ (ಪ್ರದೇಶದಲ್ಲಿ) ಅತಿಕ್ರಮಣದ ವಿಷಯದ ಬಗ್ಗೆಯೂ ತನಿಖೆ ನಡೆಸಬೇಕಾಗಿದೆ’ ಎಂದು ನ್ಯಾಯಾಧೀಶರು ಹೇಳಿದರು.

ನಾಗರಿಕರು ದೂರು ನೀಡಿದ ನಂತರವೂ ನೆಲಮಾಳಿಗೆಯ ಅಕ್ರಮ ಬಳಕೆಯ ಬಗ್ಗೆ ಕ್ರಮ ತೆಗೆದುಕೊಳ್ಳದೆ, ಸಮಸ್ಯೆಯನ್ನು ಬಾಕಿ ಉಳಿಸಿದ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಅಧಿಕಾರಿಗಳ ಪಾತ್ರವು ಅವರ ಜಡತ್ವವನ್ನು ಬಿಚ್ಚಿಡುತ್ತದೆ ಎಂದು ನ್ಯಾಯಾಧೀಶರು ಚಾಟಿ ಬೀಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT