ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ಕುಡಿಯುವ ನೀರಿನ ಸಮಸ್ಯೆ: ಎಎಪಿ ನಿಯೋಗದಿಂದ ಲೆಫ್ಟಿನೆಂಟ್ ಗವರ್ನರ್ ಭೇಟಿ

Published 23 ಜೂನ್ 2024, 10:23 IST
Last Updated 23 ಜೂನ್ 2024, 10:23 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ನೀರಿನ ಸಮಸ್ಯೆ ಕುರಿತಂತೆ ಎಎಪಿ ನಿಯೋಗವು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರನ್ನು ಭೇಟಿ ಮಾಡಿದೆ. ಭೇಟಿ ಬಳಿಕ ಪ್ರತಿಕ್ರಿಯಿಸಿರುವ ನಿಯೋಗದ ಸದಸ್ಯರು, ಸಮಸ್ಯೆ ಕುರಿತಂತೆ ಹರಿಯಾಣ ಸರ್ಕಾರದ ಜೊತೆ ಮಾತುಕತೆ ನಡೆಸುವುದಾಗಿ ಸಕ್ಸೇನಾ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಸಕ್ಸೇನಾ ಅವರನ್ನು ಭೇಟಿಯಾದ 10 ಸದಸ್ಯರ ಎಎಪಿ ನಿಯೋಗದಲ್ಲಿ ದೆಹಲಿ ಸಚಿವ ಸೌರಭ್ ಭಾರದ್ವಾಜ್, ಸಂಸದ ಸಂಜಯ್ ಸಿಂಗ್ ಮತ್ತು ಶಾಸಕ ಸೋಮನಾಥ್ ಭಾರ್ತಿ ಸಹ ಇದ್ದರು.

‘ಜೂನ್ 28ಕ್ಕೆ ಮುಂಗಾರು ಮಳೆ ಆರಂಭದ ನಿರೀಕ್ಷೆ ಇದೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಈಗಾಗಲೇ ಮಳೆ ಆರಂಭವಾಗಿದೆ. ಇದು ಕೇವಲ ಒಂದು ವಾರದ ವಿಷಯ. ಹೀಗಾಗಿ, ಒಂದು ವಾರದಮಟ್ಟಿಗೆ ಹರಿಯಾಣದಿಂದ ದೆಹಲಿಗೆ ನೀರು ಬಿಡಿಸುವಂತೆ ಮನವಿ ಮಾಡಿದ್ದೇವೆ’ಎಂದು ಭೇಟಿ ಬಳಿಕ ಭಾರದ್ವಾಜ್ ಹೇಳಿದರು.

ದೆಹಲಿಗೆ ನೀರು ತರಲು ಪ್ರಯತ್ನಿಸುತ್ತೇನೆ. ಹರಿಯಾಣದ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಲೆಫ್ಟಿನೆಂಟ್ ಗವರ್ನರ್ ಭರವಸೆ ನೀಡಿರುವುದಾಗಿ ಅವರು ಹೇಳಿದ್ದಾರೆ.

ಇತ್ತ, ದೆಹಲಿಗೆ ನೀರು ಹರಿಸುವಂತೆ ಒತ್ತಾಯಿಸಿ ಸಚಿವೆ ಅತಿಶಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿಗೆ ನೀರು ಹರಿಸುತ್ತಿದ್ದ ಹತ್ನಿಕುಂಡ್‌ ಬ್ಯಾರೇಜ್‌ನ ಎಲ್ಲ ಗೇಟ್‌ಗಳನ್ನು ಹರಿಯಾಣ ಸರ್ಕಾರ ಮುಚ್ಚಿದೆ ಎಂದೂ ಅವರು ಕಿಡಿಕಾರಿದ್ದಾರೆ.

‘ದೆಹಲಿಯಲ್ಲಿ ಗಂಭೀರ ನೀರಿನ ಸಮಸ್ಯೆ ಇದೆ. ದೆಹಲಿ ಜನ ತಮ್ಮ ಹಕ್ಕಿನ ನೀರನ್ನು ಪಡೆಯಬೇಕು’ಎಂದು ಎಎಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಕುಮಾರ್ ಗುಪ್ತಾ ಹೇಳಿದ್ದರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT