ನವದೆಹಲಿ: ‘ದೆಹಲಿ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ನೆಪದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಈವರೆಗೂ ವಿತರಿಸಲಾಗುತ್ತಿರುವ ಗುಲಾಬಿ ಟಿಕೆಟ್ ಬದಲಾಗಿ, ಡಿಜಿಟಲ್ ಕಾರ್ಡ್ಗಳನ್ನು ವಿತರಿಸಲಾಗುವುದು’ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಮಂಗಳವಾರ ಹೇಳಿದ್ದಾರೆ.

‘2025–26ರ ಬಜೆಟ್ ಮಂಡಿಸಿದ ಅವರು, ಸಾರಿಗೆ ಇಲಾಖೆಯಲ್ಲಿ ಮೂಲಸೌಕರ್ಯ ಹೆಚ್ಚಳ ಮತ್ತು ನಗರ ಸಾರಿಗೆಗೆ ₹12,952 ಕೋಟಿ ಮೀಸಲಿಡಲಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಡ್ನಿಂದಾಗಿ ಮಹಿಳೆಯರು ಯಾವಾಗ ಬೇಕಾದರೂ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ’ ಎಂದು ತಿಳಿಸಿದ್ದಾರೆ.

‘ಭೌತಿಕ ಟಿಕೆಟ್ನೊಂದಿಗೆ ಅಂಟಿಕೊಂಡಿದ್ದ ‘ಗುಲಾಬಿ ಭ್ರಷ್ಟಾಚಾರ’ವನ್ನು ಕೊನೆಗಾಣಿಸುವ ಮತ್ತು ಎಲ್ಲದಕ್ಕೂ ಡಿಜಟಲ್ ಸ್ಪರ್ಶ ನೀಡುವ ಯತ್ನ ಇದಾಗಿದೆ. ದೆಹಲಿ ಸರ್ಕಾರದ ಎಲ್ಲಾ ವ್ಯವಸ್ಥೆಯಲ್ಲೂ ಆಧುನಿಕತೆ ಹಾಗೂ ಕಾರ್ಯಕ್ಷಮತೆ ತರಲಾಗುವುದು. ಇದರಿಂದ ದೆಹಲಿ ಸಾರ್ವಜನಿಕ ಸಾರಿಗೆಯು ಎಲ್ಲರಿಗೂ ಲಭ್ಯವಾಗುವಂತೆ, ವಿಶ್ವಾಸಾರ್ಹತೆ ಮತ್ತು ಜಾಗತಿಕವಾಗಿಯೂ ಗುರುತಿಸಲ್ಪಡುವಂತೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

2019ರಲ್ಲಿ ಗುಲಾಬಿ ಟಿಕೆಟ್ ಅನ್ನು ದೆಹಲಿಯಲ್ಲಿದ್ದ ಎಎಪಿ ಸರ್ಕಾರ ಪರಿಚಯಿಸಿತ್ತು. ಈ ಯೋಜನೆ ಮೂಲಕ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಮೂಲಕ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು. ₹10 ನೀಡಿದರೆ ಗುಲಾಬಿ ಬಣ್ಣದ ಟಿಕೆಟ್ ರೂಪದಲ್ಲಿ ಬಸ್ ಪಾಸ್ ವಿತರಿಸಲಾಗುತ್ತಿತ್ತು.

‘ದೆಹಲಿಯಲ್ಲಿ ಸದ್ಯ 2,152 ಬ್ಯಾಟರಿ ಚಾಲಿತ ಬಸ್ಸುಗಳಿವೆ. 2025–26ರಲ್ಲಿ 5 ಸಾವಿರ ಹೊಸ ಬಸ್ಸುಗಳು ರಸ್ತೆಗಿಳಿಯಲಿವೆ’ ಎಂದು ರೇಖಾ ಗುಪ್ತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.