ನವದೆಹಲಿ: ಕಸ್ಟಡಿಯಲ್ಲಿರುವಾಗ ಸಂಸತ್ ಅಧಿವೇಶನಗಳಿಗೆ ಹಾಜರಾಗಲು ಸುಮಾರು ₹ 4 ಲಕ್ಷ ಹಣ ಠೇವಣಿ ಇಡಬೇಕು ಎನ್ನುವ ಆದೇಶವನ್ನು ಮರುಪರಿಶೀಲಿಸಲು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದ ಸಂಸದ ಅಬ್ದುಲ್ ರಶೀದ್ ಸಲ್ಲಿಸಿದ್ದ ಅರ್ಜಿಗೆ ದೆಹಲಿ ಹೈಕೋರ್ಟ್ ಭಿನ್ನಮತದ ತೀರ್ಪು ನೀಡಿದೆ.
.ಸಂಸತ್ತಿಗೆ ತೆರಳಲು ಅನುಮತಿ ಕೋರಿದ MP ರಶೀದ್: NIA ನಿಲುವು ಪ್ರಶ್ನಿಸಿದ ದೆಹಲಿ HC.
ನ್ಯಾಯಮೂರ್ತಿ ವಿವೇಕ್ ಚೌಧರಿ ಅರ್ಜಿಯನ್ನು ತಿರಸ್ಕರಿಸಿದರೆ, ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅರ್ಜಿಯನ್ನು ಪುರಸ್ಕರಿಸಿದ್ದಾರೆ.

‘ನಾಬಿಬ್ಬರು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ನಾಬಿಬ್ಬರು ಪ್ರತ್ಯೇಕ ತೀರ್ಪು ನೀಡಿದ್ದೇವೆ. ಸೂಕ್ತ ಆದೇಶಕ್ಕಾಗಿ ನಾವು ಇದನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡುತ್ತೇವೆ’ ಎಂದು ಉಭಯ ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಹೇಳಿದ್ದಾರೆ.

‘ನನ್ನ ಸಹೋದರ ಈ (ಜೆ ಭಂಭಾನಿ) ಅರ್ಜಿಯನ್ನು ಪುರಸ್ಕರಿಸಿದ್ದಾರೆ, ನಾನು ತಿರಸ್ಕರಿಸಿದ್ದೇನೆ’ ಎಂದು ನ್ಯಾಯಮೂರ್ತಿ ಚೌಧರಿ ಹೇಳಿದ್ದಾರೆ.
.ಶೆಹ್ಲಾ ರಶೀದ್ ಮೇಲಿನ ದೇಶದ್ರೋಹ ಪ್ರಕರಣ ಹಿಂಪಡೆಯಲು ಕೋರ್ಟ್ ಅನುಮತಿ .
ಕಸ್ಟಡಿಯಲ್ಲಿದ್ದುಕೊಂಡು ಸಂಸತ್ ಕಲಾಪಗಳಿಗೆ ಹಾಜರಾಗಬೇಕಾದರೆ ಸುಮಾರು ₹ 4 ಲಕ್ಷ ಠೇವಣಿ ಇಡಬೇಕು ಎಂದು ಮಾರ್ಚ್ 25 ರಂದು ಕೋರ್ಟ್ ತೀರ್ಪು ನೀಡಿತ್ತು.

ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದಲ್ಲಿ ಎನ್ಐಎಯಿಂದ ಬಂಧಿರಾಗಿರುವ ಅವರು, 2019ರಿಂದ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಲು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅವರಿಗೆ ಒಂದು ತಿಂಗಳ ಮಧ್ಯಂತರ ಜಾಮೀನು ನೀಡಲಾಗಿತ್ತು.

2024 ರ ಲೋಕಸಭಾ ಚುನಾವಣೆಯಲ್ಲಿ ಒಮರ್ ಅಬ್ದುಲ್ಲಾ ಅವರನ್ನು ಸೋಲಿಸಿದ್ದರು.
.ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ರಶೀದ್ ಎಂಜಿನಿಯರ್ಗೆ 2 ದಿನ ಕಸ್ಟಡಿ ಪೆರೋಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.