ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ಗೆ ಬೆದರಿಕೆ ಬರಹ: 33 ವರ್ಷದ ಯುವಕನ ಬಂಧನ

Published 22 ಮೇ 2024, 5:00 IST
Last Updated 22 ಮೇ 2024, 5:00 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕುವಂತಹ ಗೀಚುಬರಹಗಳನ್ನು ಮೆಟ್ರೊ ರೈಲುಗಳಲ್ಲಿ ಬರೆಯುತ್ತಿದ್ದ ಯುವಕನನ್ನು ಇಂದು (ಬುಧವಾರ) ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು 33 ವರ್ಷದ ಅಂಕಿತ್ ಗೋಯಲ್ ಎಂದು ಗುರುತಿಸಲಾಗಿದೆ.

ಮೆಟ್ರೊ ರೈಲುಗಳ ಕೋಚ್‌ಗಳು ಹಾಗೂ ಸೈನ್‌ಬೋರ್ಡ್‌ಗಳಲ್ಲಿ ಗೀಚುತ್ತಿದ್ದ ಯುವಕನ ದೃಶ್ಯಗಳು ಸಿಸಿಟಿವಿ ವಿಡಿಯೊದಲ್ಲಿ ಕಂಡುಬಂದಿದ್ದವು. ಅಂಕಿತ್ ಗೋಯಲ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗೀಚುಬರಹಗಳ ಫೋಟೊಗಳನ್ನು ಹಂಚಿಕೊಂಡಿದ್ದ. ಆತನೇ ಗೀಚುಬರಹ ಬರೆದಿರಬಹುದೆಂದು ಪೊಲೀಸರು ಶಂಕಿಸಿದ್ದರು.

ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT