ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಗಾಳಿ ಗುಣಮಟ್ಟ ಸುಧಾರಣೆ: ಫೆಬ್ರುವರಿ ತಿಂಗಳಲ್ಲಿ 9 ವರ್ಷಗಳಲ್ಲೇ ಅತ್ಯುತ್ತಮ

Published 29 ಫೆಬ್ರುವರಿ 2024, 3:58 IST
Last Updated 29 ಫೆಬ್ರುವರಿ 2024, 3:58 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ವಾಯು ಗುಣಮಟ್ಟ ಸುಧಾರಿಸಿದ್ದು, 9 ವರ್ಷಗಳಲ್ಲೇ ಫೆಬ್ರುವರಿ ತಿಂಗಳಲ್ಲಿ ಉತ್ತಮ ವಾಯು ಗುಣಮಟ್ಟ ಈ ವರ್ಷ ದಾಖಲಾಗಿದೆ.

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಅಂಕಿ ಅಂಶದ ಪ್ರಕಾರ, ದೆಹಲಿಯಲ್ಲಿ ಗಾಳಿ ಗುಣಮಟ್ಟ ಸೂಚ್ಯಂಕ(ಎಕ್ಯುಐ) ಸುಮಾರು 200ರಷ್ಟು ದಾಖಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಫೆಬ್ರುವರಿ ತಿಂಗಳಲ್ಲಿ 32.5 ಮಿ.ಮೀ ಮಳೆಯಾಗಿದೆ. ಇದೂ ಸಹ ದಾಖಲೆಯಾಗಿದ್ದು, 2013ರಿಂದ ಫೆಬ್ರುವರಿ ತಿಂಗಳಲ್ಲಿ ದೆಹಲಿಯಲ್ಲಿ ಬಿದ್ದ ಅತ್ಯಧಿಕ ಮಳೆಯಾಗಿದೆ.

ದೆಹಲಿಯಲ್ಲಿ 2016ರ ಫೆಬ್ರುವರಿಯಲ್ಲಿ 293, 2017ರಲ್ಲಿ 267, 2018ರಲ್ಲಿ 235, 2019ರಲ್ಲಿ 242, 2020ರಲ್ಲಿ 240, 2021ರಲ್ಲಿ 281, 2022ರಲ್ಲಿ 225, 2023ರಲ್ಲಿ 237 ಮತ್ತು 2024ರಲ್ಲಿ 223 ಸರಾಸರಿ ಎಕ್ಯುಐ ದಾಖಲಾಗಿದೆ.

ಫೆಬ್ರುವರಿ ತಿಂಗಳಲ್ಲಿ ದೆಹಲಿ ವಾಯು ಗುಣಮಟ್ಟವು ಗಂಭೀರ ಎನ್ನಬಹುದಾದ 400ರ ಗಡಿಯನ್ನು ಒಮ್ಮೆಯೂ ದಾಟಿಲ್ಲ. ತಿಂಗಳ ಮೊದಲ 4 ದಿನ 300ರಿಂದ 400ರ(ಅತ್ಯಂತ ಕಳಪೆ) ನಡುವೆ ಇದ್ದರೆ, ನಂತರದ 10 ದಿನದ ಎಕ್ಯೂಐ 200 ರಿಂದ 300ರ(ಕಳಪೆ) ಒಳಗೆ ಇತ್ತು ಫೆಬ್ರುವರಿ 28ರವರೆಗೆ 14 ದಿನ 200ರ ಒಳಗೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT