ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಿರಾಣಿ ಅಂಗಡಿಯಲ್ಲಿ ದಿನಸಿ ಖರೀದಿಸದ ಗ್ರಾಹಕ: ಚಾಕುವಿನಿಂದ ಇರಿದು ಕೊಂದ ಮಾಲೀಕರು

Published 2 ಜುಲೈ 2024, 2:12 IST
Last Updated 2 ಜುಲೈ 2024, 2:12 IST
ಅಕ್ಷರ ಗಾತ್ರ

ನವದೆಹಲಿ: ಕಿರಾಣಿ ಅಂಗಡಿಯಲ್ಲಿ ದಿನಸಿ ಖರೀದಿಸಲಿಲ್ಲ ಎಂದು ಕೋಪಗೊಂಡಿದ್ದ ಅಂಗಡಿ ಮಾಲೀಕ ಮತ್ತು ಆತನ ಪುತ್ರರು ಸೇರಿಕೊಂಡು 30 ವರ್ಷದ ವ್ಯಕ್ತಿಯೊಬ್ಬರ ಮೇಲೆ ರಾಡ್‌ಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಕೊಂದಿರುವ ಘಟನೆ ವಾಯವ್ಯ ದೆಹಲಿಯ ಶಕುರ್‌ಪುರದಲ್ಲಿ ನಡೆದಿದೆ.

ಮೃತನನ್ನು ವಿಕ್ರಮ್ ಕುಮಾರ್ ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದ ಆರೋಪದಡಿ ಅಂಗಡಿ ಮಾಲೀಕ ಲೋಕೇಶ್ ಗುಪ್ತಾ ಮತ್ತು ಅವರ ಇಬ್ಬರು ಮಕ್ಕಳಾದ ಪ್ರಿಯಾಂಶ್ ಮತ್ತು ಹರ್ಷ್ ಅವರನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಗುಪ್ತಾ ಅವರು ಹಲವು ವರ್ಷಗಳಿಂದ ಕಿರಾಣಿ ಅಂಗಡಿ ನಡೆಸುತ್ತಿದ್ದು, ವಿಕ್ರಮ್ ಅವರ ಕುಟುಂಬಸ್ಥರು ಹಳೆಯ ಗ್ರಾಹಕರಾಗಿದ್ದರು. ಕೆಲವು ದಿನಗಳ ಹಿಂದೆ ಗುಪ್ತಾ ಹಾಗೂ ವಿಕ್ರಮ್ ಕುಟುಂಬಸ್ಥರ ನಡುವೆ ಮನಸ್ತಾಪ ಉಂಟಾಗಿತ್ತು. ಹಾಗಾಗಿ ವಿಕ್ರಮ್ ಕುಟುಂಬಸ್ಥರು ಗುಪ್ತಾ ಅಂಗಡಿಯಲ್ಲಿ ದಿನಸಿ ಪದಾರ್ಥಗಳನ್ನು ಖರೀದಿಸುವುದನ್ನು ನಿಲ್ಲಿಸಿತ್ತು. ಇದೇ ವಿಚಾರವಾಗಿ ಜಗಳ ನಡೆದಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.

ಗಲಾಟೆ ನಡೆದಾಗ ಗುಪ್ತಾ ಮತ್ತು ಅವರ ಮಕ್ಕಳು ವಿಕರ್ಮ್ ಅವರ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ. ಜತೆಗೆ ಚಾಕುವಿನಿಂದ ಆತನ ಕುತ್ತಿಗೆಗೆ ಇರಿದು ಕೊಂದಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT