ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಆತ್ಮ ರಾಮ್ ಸನಾತನ ಧರ್ಮ ಕಾಲೇಜಿನ ವಿದ್ಯಾರ್ಥಿನಿ ಸ್ನೇಹಾ ದೆಬ್ನಾಥ್ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದಾರೆ.

19 ವರ್ಷದ ಸ್ನೇಹಾ ದೆಬ್ನಾಥ್ ತ್ರಿಪುರಾ ರಾಜ್ಯದವರಾಗಿದ್ದು ದೆಹಲಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಜುಲೈ 7ರಿಂದ ನಾಪತ್ತೆಯಾಗಿದ್ದಾಳೆ ಎಂದು ಸ್ನೇಹಾ ಪೋಷಕರು ಹೇಳಿದ್ದಾರೆ.

ಸ್ನೇಹಾ ಪತ್ತೆಗಾಗಿ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಯಾವುದೇ ಸುಳಿವು ಇದುವರೆಗೂ ಸಿಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ನೇಹಾ ಕಾಣೆಯಾದ ದಿನ ಕ್ಯಾಬ್ನಲ್ಲಿ ಪ್ರಯಾಣ ಮಾಡಿದ್ದರು. ಪೊಲೀಸರು ಕ್ಯಾಬ್ ಚಾಲಕನನ್ನು ಪತ್ತೆ ಮಾಡಿದ್ದು ಆಕೆ ಇಲ್ಲಿನ ಸಿಗ್ನೇಚರ್ ಬ್ರಿಡ್ಜ್ ಬಳಿ ಇಳಿದಿದ್ದಾಗಿ ದೃಢಪಡಿಸಿದ್ದಾರೆ. ಅಲ್ಲಿಂದ ಸ್ನೇಹಾ ಎಲ್ಲಿಗೆ ಹೋದರು ಎಂಬುದು ಗೊತ್ತಾಗಿಲ್ಲ. ಈ ಸ್ಥಳದಲ್ಲಿ ಸಿಸಿಟಿವಿ ಲಭ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಈ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರೂ ಸುಳಿವು ಸಿಕ್ಕಿಲ್ಲ. ಈ ನಡುವೆ ತ್ರಿಪುರಾ ಮುಖ್ಯಮಂತ್ರಿ ಕೂಡ ಸ್ನೇಹಾರನ್ನು ತ್ವರಿತವಾಗಿ ಪತ್ತೆ ಮಾಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.