ನವದೆಹಲಿ: ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ 19 ಮಹಾನಗರಗಳ ಪೈಕಿ ದೆಹಲಿ ಪ್ರಥಮ ಸ್ಥಾನದಲ್ಲಿದ್ದು, 2023ರಲ್ಲಿ 13,366 ಪ್ರಕರಣಗಳು ದಾಖಲಾಗಿವೆ. ಅತ್ಯಾಚಾರ ಹಾಗೂ ವರದಕ್ಷಿಣೆ ಹತ್ಯೆ ಪ್ರಕರಣಗಳು ಹೆಚ್ಚು ದಾಖಲಾಗಿವೆ ಎನ್ನುವುದು ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ (ಎನ್ ಸಿ ಆರ್ ಬಿ) ದತ್ತಾಂಶದಿಂದ ಗೊತ್ತಾಗಿದೆ.
.ಸೈಬರ್ ಅಪರಾಧ: 136 ಸಿಮ್ ಕಾರ್ಡ್ಗಳನ್ನು ಹೊಂದಿದ್ದ ಆರೋಪಿ ರಾಜಸ್ಥಾನದಲ್ಲಿ ಸೆರೆ.
ದೆಹಲಿಯ ಅಪರಾಧ ದರ ಒಂದು ಲಕ್ಷ ಜನಸಂಖ್ಯೆಗೆ ಶೇ 14.4 ರಷ್ಟಿದ್ದು, 1,088 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

2022ಕ್ಕೆ ಹೋಲಿಕೆ ಮಾಡಿದರೆ 2023ರಲ್ಲಿ ದೆಹಲಿಯಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಶೇ 5.59 ಇಳಿಕೆಯಾಗಿವೆ. 2022ರಲ್ಲಿ 14,158 ಪ್ರಕರಣಗಳು ದಾಖಲಾದರೆ, 2021ರಲ್ಲಿ 13,982 ಪ್ರಕರಣಗಳು ದಾಖಲಾಗಿದ್ದವು.

ಮಹಿಳೆಯರ ಅಪಹರಣ ಹಾಗೂ ನಾಪತ್ತೆ ಪ್ರಕರಣಗಳು ಕಳವಳಕಾರಿಯಾಗಿದ್ದು, 2023ರಲ್ಲಿ 3,952 ಪ್ರಕರಣಗಳು ಪತ್ತೆಯಾಗಿವೆ. ಇಂತಹ ಪ್ರಕರಣಗಳಲ್ಲಿ ಬಿಹಾರ ರಾಜಧಾನಿ ಪಟ್ನಾ ಮೊದಲ ಸ್ಥಾನದಲ್ಲಿದ್ದು, (ಶೇ 71.3) ಎರಡನೇ ಸ್ಥಾನದಲ್ಲಿ ದೆಹಲಿ ಇದೆ (ಶೇ 52.2). ಆ್ಯಸಿಡ್ ದಾಳಿ ಪ್ರಕರಣದಲ್ಲೂ ದೆಹಲಿ ಮಂಚೂಣಿಯಲ್ಲಿದ್ದು, 2023 ರಲ್ಲಿ ಇಂತಹ 6 ಪ್ರಕರಣಗಳು ದಾಖಲಾಗಿವೆ.
.ಗುಜರಾತ್: ಅಪರಾಧ ಕೃತ್ಯ ಮರುಸೃಷ್ಟಿ; ಕೊಲೆ ಆರೋಪಿಗೆ ಗುಂಡಿಕ್ಕಿದ ಪೊಲೀಸರು!.
ಮೆಟ್ರೊ ನಗರಗಳ ಪೈಕಿ ವರದಕ್ಷಿಣೆ ಕೊಲೆ ಪ್ರಕರಣ (114), ಗಂಡನಿಂದ ಕ್ರೌರ್ಯ (4,219), ಮರ್ಯಾದಾಗೇಡಿನಿಂದ ಹಲ್ಲೆ (1,791) ಪ್ರಕರಣಗಳೂ ದೆಹಲಿಯಲ್ಲೇ ಹೆಚ್ಚು ದಾಖಲಾಗಿವೆ.

ಪೋಕ್ಸೊ ಕಾಯ್ದೆಯಡಿ ಬಾಲಕಿಯರ ಮೇಲೆ 1,048 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಇದು ಕೂಡ ದೇಶದಲ್ಲೇ ಅತಿ ಹೆಚ್ಚು.

ಬೇರೆ ನಗರಗಳಿಗೆ ಹೋಲಿಸಿದರೆ ಮಹಿಳೆಯರ ಮೇಲಿನ ಸೈಬರ್ ಅಪರಾಧಗಳು ದೆಹಲಿಯಲ್ಲಿ ಕಡಿಮೆ ಇದ್ದು, 36 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು (127), ಹೈದರಾಬಾದ್ (53) ಹಾಗೂ ಲಖನೌನಲ್ಲಿ (41) ಈ ಸಂಖ್ಯೆ ಹೆಚ್ಚಿದೆ.
.ಹಾವೇರಿಯಲ್ಲಿ ಸೈಬರ್ ಅಪರಾಧ | ಮೂರು ವರ್ಷ: 263 ಪ್ರಕರಣಗಳ ಸುಳಿವಿಲ್ಲ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.