ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ದಟ್ಟ ಮಂಜು: ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ

Published 15 ಜನವರಿ 2024, 4:40 IST
Last Updated 15 ಜನವರಿ 2024, 4:40 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನ ಇಳಿಕೆಯಾಗಿದ್ದು, ದಟ್ಟ ಮಂಜಿನ ಪರದೆ ಆವರಿಸಿಕೊಂಡಿದೆ. ಇದರಿಂದಾಗಿ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ವ್ಯತ್ಯಯವಾಗಿದೆ. ಸುಮಾರು 18 ರೈಲುಗಳ ಕಾರ್ಯಾಚರಣೆ ವಿಳಂಬವಾಗಿದೆ.

ಕರ್ತವ್ಯ ಪಥದಲ್ಲಿ ದಟ್ಟ ಮಂಜಿನ ನಡುವೆಯೇ ಗಣರಾಜ್ಯೋತ್ಸವದ ಪೂರ್ವಾಭ್ಯಾಸ ನಡೆಯಿತು. ಚಳಿಗಾಳಿ ಹಾಗೂ ಮಂಜಿನಿಂದಾಗಿ ಜನ ಬೆಂಕಿಯ ಶಾಖದಲ್ಲಿ ಮೈ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬಂದವು.

ಬೆಳಿಗ್ಗೆ 8 ಗಂಟೆಯಾದರೂ ಕೂಡ ಮಂಜಿನ ಪರದೆ ಸರಿಯದಿದ್ದರಿಂದ, ಜನರ ದೈನಂದಿನ ಚುಟುವಟಿಕೆಗಳಿಗೆ ತೊಂದರೆಯಾದವು. ವಾಹನ ಸವಾರರು ಪರದಾಡುವಂತಾಯಿತು.

ವಿಮಾನ ಸಂಚಾರದಲ್ಲಿ ವಿಳಂಬವಾಗಿದ್ದರಿಂದ ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿರು ತೊಂದರೆ ಅನುಭವಿಸಿದರು. 2–3 ಗಂಟೆಗೂ ಅಧಿಕ ಹೊತ್ತು ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

ಹವಾಮಾನ ವೈಪರೀತ್ಯದಿಂದ ವಿಮಾನಗಳ ಕಾರ್ಯಾಚರಣೆಗೆ ತೊಂದರೆಯಾಗಿದ್ದು, ದೆಹಲಿ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಸಲಹೆಯನ್ನು ಬಿಡುಗಡೆ ಮಾಡಿದೆ.

‘ದಟ್ಟ ಮಂಜಿನಿಂದಾಗಿ, ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಗೆ ಸಮಸ್ಯೆ ಉಂಟಾಗಿದೆ. ವಿಮಾನದ ಮಾಹಿತಿಗಾಗಿ ಪ್ರಯಾಣಿಕರು ಏರ್‌ಲೈನ್ಸ್‌ ಅನ್ನು ಸಂಪರ್ಕಿಸಲು ಕೋರಲಾಗಿದೆ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT