ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬರಿ ಮಸೀದಿ ಧ್ವಂಸವಾದಾಗ ಶಿವಸೇನಾ ಅಲ್ಲಿರಲಿಲ್ಲ: ಫಡಣವೀಸ್

Last Updated 1 ಮೇ 2022, 16:09 IST
ಅಕ್ಷರ ಗಾತ್ರ

ಮುಂಬೈ: ಹಿಂದುತ್ವದ ವಿಚಾರದಲ್ಲಿ ಶಿವಸೇನಾ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌, ‘ಬಾಬರಿ ಮಸೀದಿ ಧ್ವಂಸವಾದಾಗ ನಾನು ಆ ಸ್ಥಳದಲ್ಲಿದ್ದೆ. ಆದರೆ ಶಿವಸೇನಾ ನಾಯಕರು ಯಾರೂ ಅಲ್ಲಿರಲಿಲ್ಲ’ ಎಂದು ಹೇಳಿದ್ದಾರೆ.

ಬಾಬರಿ ಮಸೀದಿಯನ್ನು ಕೆಡವಿದಾಗ ಬಿಜೆಪಿಯವರು ಎಲ್ಲಿದ್ದರು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕೇಳಿದ್ದರು.

ಭಾನುವಾರ ಇಲ್ಲಿ ನಡೆದ ರ‍್ಯಾಲಿಯಲ್ಲಿ ಉದ್ಧವ್‌ ಪ್ರಶ್ನೆಗೆ ಉತ್ತರಿಸುತ್ತಾ, ‘ಬಾಬರಿ ಮಸೀದಿಯನ್ನು ಕೆಡವಿದಾಗ ನಾವು ಎಲ್ಲಿ ಅವಿತುಕೊಂಡಿದ್ದೆವು ಎಂದು ಅವರು ಕೇಳಿದ್ದಾರೆ, ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಿ ಎಂದಿದ್ದಕ್ಕೆ ಹೆದರಿಕೊಂಡಿದ್ದವರು ಈಗ ತಾವೇ ಬಾಬರಿ ಮಸೀದಿ ಧ್ವಂಸ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

‘ಬಾಬರಿ ಮಸೀದಿ ಉರುಳಿಸುವ ಸಂದರ್ಭದಲ್ಲಿ ನಾನು ಅಲ್ಲಿದ್ದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಅದಕ್ಕೂ ಮೊದಲು ರಾಮಮಂದಿರಕ್ಕಾಗಿ ಕರ ಸೇವಾ ನಡೆದಾಗ 18 ದಿನಗಳ ಕಾಲ ಬದೌನ್‌ ಜೈಲಿನಲ್ಲಿದ್ದೆ. ಮಸೀದಿ ಕೆಡವಿದಾಗ ಮಹಾರಾಷ್ಟ್ರದ ಯಾವ ನಾಯಕರು ಅಯೋಧ್ಯೆಗೆ ಹೋಗಿದ್ದರು ಹೇಳಿ?’ ಎಂದು ಪ್ರಶ್ನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT