ತಿರುಪತಿ (ಆಂಧ್ರ ಪ್ರದೇಶ): ತಿರುಮಲದ ವೆಂಕಟೇಶ್ವರ ದೇವಾಲಯಕ್ಕೆ ತಮಿಳುನಾಡು ಮೂಲದ ಭಕ್ತರೊಬ್ಬರು ₹2 ಕೋಟಿ ಮೌಲ್ಯದ ಚಿನ್ನದ ಆಭರಣಗಳನ್ನು ಅರ್ಪಿಸಿದ್ದಾರೆ.

ತಮಿಳುನಾಡಿನ ಥೇನಿಯ ಭಕ್ತ ಥಂಗದೊರೈ ಪೂಜೆಯ ಬಳಿಕ ಚಿನ್ನದ ಶಂಕು ಮತ್ತು ಚಕ್ರವನ್ನು ದೇವಾಲಯದ ಆಡಳಿತ ಮಂಡಳಿಗೆ ನೀಡಿದ್ದಾರೆ. ಚಿನ್ನದ ಕಾಣಿಕೆಗಳ ತೂಕ 3.5 ಕೆ.ಜಿ. ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್–19 ಲಾಕ್ಡೌನ್ ಸಮಯದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಭಕ್ತಾದಿಯು ಗುಣಮುಖರಾಗಲು ಪ್ರಾರ್ಥನೆ ಸಲ್ಲಿಸಿ, ಚಿನ್ನದ ಆಭರಣಗಳನ್ನು ಅರ್ಪಿಸುವ ಹರಕೆಯೊತ್ತಿದ್ದರು. ಅವರು ಗುಣಮುಖರಾಗಿದ್ದು, ಹರಕೆ ತೀರಿಸುವ ಸಲುವಾಗಿ ಇದನ್ನು ಅರ್ಪಿಸಿದ್ದಾರೆ ಎಂದು ಭಕ್ತಾದಿ ತಿಳಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.