ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಶ್ವಾಸಾರ್ಹ ಅಲ್ಗಾರಿದಮ್‌ನೊಂದಿಗೆ ಡಿಜಿಟಲ್ ನಾಗರಿಕ್ ಪ್ರಯೋಗ ಬೇಡ:ಸಚಿವ ರಾಜೀವ್

Published 24 ಫೆಬ್ರುವರಿ 2024, 13:40 IST
Last Updated 24 ಫೆಬ್ರುವರಿ 2024, 13:40 IST
ಅಕ್ಷರ ಗಾತ್ರ

ನವದೆಹಲಿ: ‘ತನ್ನ ವಿಶ್ವಾಸಾರ್ಹವಲ್ಲದ ಕೃತಕ ಬುದ್ಧಿಮತ್ತೆ ತಂತ್ರಾಂಶಗಳಿಂದ ಉಂಟಾಗುವ ಎಡವಟ್ಟುಗಳು ಯಾವುದೇ ಕಾನೂನಿನ ರಕ್ಷಣೆ ಪಡೆಯಲು ಅನರ್ಹ. ಹಾಗೆಯೇ ಭಾರತದ ಡಿಜಿಟಲ್ ನಾಗರಿಕ್‌ ಜತೆಗೆ ಯಾವುದೇ ಪ್ರಯೋಗ ಬೇಡ’ ಎಂದು ಗೂಗಲ್‌ಗೆ ಮಾಹಿತಿ ತಂತ್ರಜ್ಞಾನ ರಾಜ್ಯ ರಾಜೀವ್ ಚಂದ್ರಶೇಖರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕುರಿತು ಗೂಗಲ್‌ನ ಜೆಮಿನಿ ನೀಡಿದ ಉತ್ತರದಲ್ಲಿ ಅವರನ್ನು ಪ್ರಭುತ್ವವಾದಿ ಎಂದು ಉತ್ತರ ನೀಡಿದ್ದು ಮತ್ತು ಇದೇ ಪ್ರಶ್ನೆಗೆ ಅಮೆರಿಕದ ಡೊನಾಲ್ಡ್‌ ಟ್ರಂಪ್ ಮತ್ತು ಉಕ್ರೇನ್‌ ಅಧ್ಯಕ್ಷ ವೊಲಿಡಿಮಿರ್‌ ಝೆಲನ್‌ಸ್ಕಿ ಅವರ ಬಗ್ಗೆ ಮೃದುಧೋರಣೆಯ ಉತ್ತರಗಳು ಬಂದಿದ್ದರ ಕುರಿತು ಸಚಿವ ಚಂದ್ರಶೇಖರ್‌ ಹರಿಹಾಯ್ದಿದ್ದರು.

ಜೆಮಿನಿ ನೀಡಿದ ಉತ್ತರವನ್ನು ಹಲವರು ಮೈಕ್ರೊ ಬ್ಲಾಗಿಂಗ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನು ಉಲ್ಲೇಖಿಸಿದ್ದ ಸಚಿವ ರಾಜೀವ್ ಚಂದ್ರಶೇಖರ್, ಗೂಗಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

‘ಪ್ರಚಲಿತ ವಿಷಯಗಳು ಹಾಗೂ ರಾಜಕೀಯ ಸಂಗತಿಗಳ ಕುರಿತು ಚಾಟ್‌ಬಾಟ್‌ಗಳು ಸದಾ ವಿಶ್ವಾಸಾರ್ಹವಾಗಿರುವುದಿಲ್ಲ. ಹೀಗಾಗಿ ನಮ್ಮ ಡಿಜಿಟಲ್ ನಾಗರಿಕ್‌ ಅನ್ನು ವಿಶ್ವಾಸಾರ್ಹವಲ್ಲದ ಕೃತಕ ಬುದ್ಧಿಮತ್ತೆಯ ಪ್ರಯೋಗಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಗೂಗಲ್‌ಗೆ ಸ್ಪಷ್ಟವಾಗಿ ಹೇಳಲಾಗಿದೆ. ಇಂಥ ಯಾವುದೇ ಅರಿಯದ ತಪ್ಪುಗಳಿಗೆ ಕಾನೂನಿನ ದೃಷ್ಟಿಯಲ್ಲಿ ಕ್ಷಮೆಯೂ ಸಿಗದು’ ಎಂದಿದ್ದಾರೆ.

ಚಾಟ್‌ಬಾಟ್‌ನ Text-to-image ಜನರೇಷನ್‌ ವೈಶಿಷ್ಟ್ಯವು ವಿವಾದಕ್ಕೆ ಸಿಲುಕಿಕೊಂಡಿದೆ. ಇತ್ತೀಚೆಗೆ ಮೌಂಟೇನ್ ವ್ಯೂ, ಕ್ಯಾಲಿಫೋರ್ನಿಯಾ ಮೂಲದ ಟೆಕ್ ದೈತ್ಯ, ಜೆಮಿನಿ AI ಚಾಟ್‌ಬಾಟ್‌ ನೀಡಿದ ಚಿತ್ರಗಳು ವಿವಾದಕ್ಕೆ ಕಾರಣವಾಗಿದ್ದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT