ಹೈದರಾಬಾದ್: ಮಾಂಸ ಮತ್ತು ಮಾಂಸದ ಉತ್ಪನ್ನಗಳಿಗೆ ಹಲಾಲ್ ಅನುಸರಣೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ನ ರಫ್ತುದಾರರು ಈಗ ತಮ್ಮ ಉತ್ಪನ್ನಗಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ.

ಉತ್ಪನ್ನದಲ್ಲಿ ಹಂದಿ ಮಾಂಸ ಬೆರೆತಿದೆಯೇ, ಇಲ್ಲವೇ ಎಂಬುದನ್ನು ಪ್ರಮಾಣೀಕರಿಸಲು ರಾಷ್ಟ್ರೀಯ ಮಾಂಸ ಸಂಶೋಧನಾ ಕೇಂದ್ರದಲ್ಲಿ(ಎನ್ಆರ್ಸಿಎಂ) ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ತಮ್ಮ ಪ್ರಯೋಗಾಲಯವು ಹಲಾಲ್ ದೃಢೀಕರಿಸಲು ಎನ್ಎಬಿಎಲ್(ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತೆ ಮಂಡಳಿ) ಮಾನ್ಯತೆ ಪಡೆದಿದೆ. ಅಂದರೆ ತಮ್ಮ ಲ್ಯಾಬ್ ಯಾವುದೇ ಉತ್ಪನ್ನದಲ್ಲಿ ಹಂದಿಮಾಂಸದ ಸೇರಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಬಹುದು. ನಮ್ಮ ವರದಿಗಳು ಜಾಗತಿಕವಾಗಿ ಸ್ವೀಕಾರಾರ್ಹವಾಗಿವೆ ಎಂದು ಎನ್ಆರ್ಸಿಎಂ ವಿಜ್ಞಾನಿ ವಿಷ್ಣುರಾಜ್ ಎಂ ಆರ್ ಹೇಳಿದ್ದಾರೆ.

ನಮ್ಮ ಪ್ರಯೋಗಾಲಯದಲ್ಲಿ ದೃಢೀಕರಿಸಿದ ಬಳಿಕ ಆ ಪ್ರಮಾಣಪತ್ರವನ್ನು ಇಟ್ಟುಕೊಂಡು ರಫ್ತುದಾರರು ತಮ್ಮ ಉತ್ಪನ್ನಗಳು ಹಲಾಲ್ ಉತ್ಪನ್ನವೆಂದು ಮಾರಾಟ ಮಾಡಲು ಬಳಸಬಹುದು ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ

ಮಲೇಷಿಯಾ ಮತ್ತು ಇಂಡೋನೇಷ್ಯಾದಂತಹ ಕೆಲವು ದೇಶಗಳಿಗೆ ಆಹಾರ (ಮಾಂಸ, ಮೀನು ಆಹಾರ) ಅಥವಾ ಆಹಾರೇತರ (ಸೌಂದರ್ಯವರ್ಧಕಗಳು) ಉತ್ಪನ್ನಗಳ ರಫ್ತಿಗೆ ಹಲಾಲ್ ಪ್ರಮಾಣೀಕರಣದ ಅಗತ್ಯವಿದೆ.

ಸಾಮಾನ್ಯವಾಗಿ ಉತ್ಪನ್ನಗಳ ಹಲಾಲ್ ಪರೀಕ್ಷೆಯನ್ನು ಧಾರ್ಮಿಕ ಕೇಂದ್ರಗಳು ಕೆಲವು ನಿಯಮಾವಳಿಗಳ ಅನುಸಾರ ನಡೆಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.