ನಾಗ್ಪುರ: ದೇಶದಲ್ಲಿರುವ ನೂರು ಕೋಟಿ ಹಿಂದೂಗಳನ್ನು ಮಣಿಸಲು 15 ಕೋಟಿ ಮುಸ್ಲಿಮರು ಸಾಕು ಎಂದು ಹೇಳಿಕೆ ನೀಡಿದ್ದ ಎಐಎಂಐಎಂ ಮುಖಂಡ ವಾರಿಸ್ ಪಠಾನ್‌ಗೆ ತಿರುಗೇಟು ನೀಡಿರುವ ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್, ‘ನಮ್ಮ ತಾಳ್ಮೆಯನ್ನೇ ನೀವು ದೌರ್ಬಲ್ಯ ಎಂದು ತಪ್ಪು ತಿಳಿಯಬೇಡಿ’ ಎಂದು ಹೇಳಿದ್ದಾರೆ.

ವರದಿಗಾರರೊಂದಿಗೆ ಮಾತನಾಡಿದ ಫಡಣವೀಸ್, ’ಪಠಾನ್ ಅವರು ಕ್ಷಮೆ ಕೇಳಬೇಕು ಮತ್ತು ಉದ್ದವ್ ಠಾಕ್ರೆ ಸರ್ಕಾರ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‘ಪಠಾಣ್ ಅವರು ಹೇಳಿಕೆಯನ್ನು ಖಂಡಿಸುತ್ತೇನೆ ಮತ್ತು ಅವರು ಎಲ್ಲರ ಕ್ಷಮೆಯಾಚಿಸಬೇಕು. ಒಂದು ವೇಳೆ ಅವರು ಕ್ಷಮೆ ಕೇಳದಿದ್ದರೆ, ಮಹಾರಾಷ್ಟ್ರ ಸರ್ಕಾರ ಅವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದರು.

‘100 ಕೋಟಿ ಹಿಂದೂಗಳು ಇರುವುದರಿಂದಲೇ, ಈ ದೇಶದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿದ್ದಾರೆ ಮತ್ತು ಸ್ವಾತಂತ್ರ್ಯವನ್ನು ಖುಷಿಯಿಂದಅನುಭವಿಸುತ್ತಿದ್ದಾರೆ ಎನ್ನುವುದನ್ನು ಪಠಾಣ್ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಮುಸ್ಲಿಮರು ಬಹುಸಂಖ್ಯಾತರಿರುವ ದೇಶದಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಲು ಯಾರಿಗೂ ಧೈರ್ಯವಿಲ್ಲ. ಹಿಂದೂಗಳಲ್ಲಿ ತಾಳ್ಮೆ ಇದೆ. ಆದರೆ, ಅದನ್ನೇ ದೌರ್ಬಲ್ಯ ಎಂದು ತಪ್ಪು ತಿಳಿಯಬಾರದು’ ಎಂದು ಅವರು ಎಚ್ಚರಿಸಿದರು.

ಫೆಬ್ರುವರಿ 16ರಂದು ಕಲಬುರ್ಗಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಪಠಾನ್ ಈ ಹೇಳಿಕೆಯನ್ನು ನೀಡಿದ್ದರು. ‘ನಾನು ಹೇಳಿದ್ದು ಬೇರೆ ಅರ್ಥದಲ್ಲಿ’ ಎಂದು ನಂತರ ಅವರು ಸಮರ್ಥನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.