ನವದೆಹಲಿ: ಅಸ್ತಿತ್ವದಲ್ಲಿರುವ ವರದಕ್ಷಿಣೆ ವಿರೋಧಿ ಕಾನೂನು ಪರಿಣಾಮಕಾರಿಯಾಗಿಲ್ಲದ ಕಾರಣ ದುರ್ಬಳಕೆಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಕಳವಳ ವ್ಯಕ್ತಪಡಿಸಿತು.

ಇದೇ ಸಂದರ್ಭದಲ್ಲಿ, ‘ವರದಕ್ಷಿಣೆ ಎಂಬ ಕರಾಳ ಪದ್ಧತಿ ಈಗಲೂ ವ್ಯಾಪಕವಾಗಿದೆ. ಇದನ್ನು ಕಿತ್ತೊಗೆಯಬೇಕಿರುವುದು ಸಾಂವಿಧಾನಿಕ ಮತ್ತು ಸಾಮಾಜಿಕ ತುರ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರ ನೇತೃತ್ವದ ನ್ಯಾಯಪೀಠವು, 24 ವರ್ಷ ಹಳೆಯ ವರದಕ್ಷಿಣಿ ಕಿರುಕುಳಕ್ಕೆ ಸಂಬಂಧಿಸಿದ ಸಾವಿನ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿತು.

ವರದಕ್ಷಿಣೆ ವಿರೋಧಿ ಕಾನೂನಿನ ದುರ್ಬಳಕೆಯು ನ್ಯಾಯಾಂಗಕ್ಕೆ ಸವಾಲಾಗಿದ್ದು, ಇದಕ್ಕೆ ತುರ್ತು ಪರಿಹಾರ ಬೇಕಿದೆ. ಸಮಸ್ಯೆಯ ನಿವಾರಣೆಗೆ ನಿರಂತರ ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದು ಹೇಳಿ ಹಲವು ನಿರ್ದೇಶನಗಳನ್ನು ನೀಡಿತು.

ಐಪಿಸಿ ಸೆಕ್ಷನ್ 304ಬಿ ಮತ್ತು 498ಎ ಅಡಿಯಲ್ಲಿ ದಾಖಲಾಗಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಹೈಕೋರ್ಟ್ಗಳಿಗೆ ತಿಳಿಸಿತು.

ಇದೇ ವೇಳೆ, ಎಲ್ಲಾ ಹಂತದ ಶೈಕ್ಷಣಿಕ ಪಠ್ಯಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರುವ ಬಗ್ಗೆ ಚಿಂತನೆ ನಡೆಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.