ಪುಣೆ: ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ್ ಖಾಡ್ಸೆ ಅವರ ಅಳಿಯ ಪ್ರಾಂಜಲ್ ಖೇವಲ್ಕರ್ ಸೇರಿದಂತೆ ಐವರು ಆರೋಪಿಗಳನ್ನು ಇಲ್ಲಿನ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಜೆ.ಜಿ ದೋರ್ಲೆ ಅವರ ಮುಂದೆ ಗುರುವಾರ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ತನಿಖೆ ವೇಳೆ ಆರೋಪಿಗಳ ಮೊಬೈಲ್ಗಳಲ್ಲಿ ಕೆಲವು ಆಕ್ಷೇಪಾರ್ಹ ಚಾಟ್ಗಳು ಮತ್ತು ವಿಡಿಯೊಗಳು ಲಭ್ಯವಾಗಿವೆ. ಹೀಗಾಗಿ ಪೊಲೀಸ್ ಕಸ್ಟಡಿ ವಿಸ್ತರಿಸಿ ಎಂದು ತನಿಖಾಧಿಕಾರಿಗಳು ಕೋರಿದರು.

ಆರೋಪಿಗಳ ಪರ ವಕೀಲರು ಇದಕ್ಕೆ ಆಕ್ಷೇಪಿಸಿದರಲ್ಲದೇ ಈಗಾಗಲೇ ಇಬ್ಬರು ಮಹಿಳೆಯರ ಪರ್ಸ್ನಲ್ಲಿ ದೊರೆತಿದ್ದ ಮಾದಕ ವಸ್ತುವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದರು.

ಖರಾಡಿ ಪ್ರದೇಶದ ಸ್ಟುಡಿಯೊ ಅಪಾರ್ಟ್ಮೆಂಟ್ನಲ್ಲಿ ಭಾನುವಾರ ನಸುಕಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ (ಮಾದಕ ವಸ್ತು) ಪಾರ್ಟಿ ಮೇಲೆ ಪುಣೆ ಅಪರಾಧ ವಿಭಾಗದ ಪೊಲೀಸರು ದಾಳಿ ಮಾಡಿ ಖೇವಲ್ಕರ್ ಸೇರಿ ಆರು ಮಂದಿಯನ್ನು ಬಂಧಿಸಿದ್ದರು. ಕೊಕೇನ್, ಮರಿಜುವಾನ, ಹುಕ್ಕಾ ಸೆಟ್, ಮದ್ಯದ ಬಾಟಲಿ ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.