ಚಂಡೀಗಢ: ಮಾದಕವಸ್ತು ನಿಗ್ರಹ ಅಭಿಯಾನದ ಭಾಗವಾಗಿ ರಾಜ್ಯದಲ್ಲಿ 101 ಮಾದಕವಸ್ತು ಕಳ್ಳಸಾಗಣೆದಾರರನ್ನು ಪಂಜಾಬ್ ಪೊಲೀಸ್ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಇಂದು (ಶುಕ್ರವಾರ) ತಿಳಿಸಿದ್ದಾರೆ.

ಬಂಧಿತರಿಂದ 15.9 ಕೆ.ಜಿ. ಹೆರಾಯಿನ್, 102 ಕೆ.ಜಿ ಪೊಪಿ ಹಸ್ಕ್ ಹಾಗೂ ₹25.52 ಲಕ್ಷ ವಶಪಡಿಸಿಕೊಳ್ಳಲಾಗಿದೆ.

ಮಾದಕವಸ್ತುಗಳ ವಿರುದ್ದ ಪಂಜಾಬ್ನಲ್ಲಿ 'ಯುದ್ಧ್ ನಶಿಯಾ ವಿರುದ್ಧ್' ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ 82ನೇ ದಿನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಇದರೊಂದಿಗೆ ಈವರೆಗೆ ಒಟ್ಟು 12,650 ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ.

ಡಿಜಿಪಿ ಗೌರವ್ ಯಾದವ್ ಅವರ ನೇತತ್ವದಲ್ಲಿ ರಾಜ್ಯದ ಎಲ್ಲ 28 ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

460 ಪ್ರದೇಶಗಳಲ್ಲಿ 1,300 ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ 200 ಪೊಲೀಸ್ ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಈ ಸಂಬಂಧ 79 ಎಫ್ಐಆರ್ ದಾಖಲಾಗಿವೆ.

ಡ್ರಗ್ಸ್ ಮುಕ್ತ ಪಂಜಾಬ್ ರಾಜ್ಯವನ್ನಾಗಿ ಮಾಡಲು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಭಗವಂತ ಮಾನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.