ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೈದರಾಬಾದ್‌ | ಕಂಡಕ್ಟರ್ ಮೇಲೆ ಹಾವು ಎಸೆದ ಮಹಿಳೆ

Published : 9 ಆಗಸ್ಟ್ 2024, 13:29 IST
Last Updated : 9 ಆಗಸ್ಟ್ 2024, 13:29 IST
ಫಾಲೋ ಮಾಡಿ
Comments

ಹೈದರಾಬಾದ್‌: ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರು ಬಸ್ ಮೇಲೆ ಬಾಟಲಿ ತೂರಿ, ಮಹಿಳಾ ಕಂಡಕ್ಟರ್ ಮೇಲೆ ಹಾವು ಎಸೆದ ವಿಚಿತ್ರ ಘಟನೆಯೊಂದು ಹೈದರಬಾದ್‌ನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ಸಂಜೆ ವಿದ್ಯಾನಗರದಲ್ಲಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಜಿಎಸ್‌ಆರ್‌ಟಿಸಿ)ಗೆ ಸೇರಿದ ಬಸ್‌ ನಿಲ್ಲಿಸಿಲ್ಲ ಎಂಬ ಕಾರಣಕ್ಕೆ ಮಹಿಳೆ ಮದ್ಯದ ಬಾಟಲಿ ಎಸೆದು, ಬಸ್ ಹಿಂದಿನ ವಿಂಡ್‌ಶೀಲ್ಡ್‌ಗೆ ಹಾನಿ ಮಾಡಿದರು. ಇದನ್ನು ಕಂಡಕ್ಟರ್ ಪ್ರಶ್ನಿಸಿದಾಗ, ತನ್ನ ಬ್ಯಾಗ್‌ನಿಂದ ಹಾವನ್ನು ತೆಗೆದು ಕಂಡಕ್ಟರ್ ಮೇಲೆ ಎಸೆದಿದ್ದು, ಕಂಡಕ್ಟರ್ ಅಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಘಟನೆಯ ಕುರಿತು ನಲ್ಲಕುಂಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಟಿಜಿಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾನಗರ ಬಸ್ ನಿಲ್ದಾಣದಲ್ಲಿ ಚಾಲಕ ವಾಹನವನ್ನು ನಿಲ್ಲಿಸದ ಕಾರಣ ಮಹಿಳೆ ಬಸ್ ಮೇಲೆ ದಾಳಿ ಮಾಡಿದ್ದಾರೆ ಎಂಬುದು ಸುಳ್ಳು ಎಂದೂ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಯ ಪತಿ ಹಾವು ಹಿಡಿಯುವವರಾಗಿದ್ದು, ನಾಗರ ಪಂಚಮಿ ನಿಮಿತ್ತ ಮಹಿಳೆ ಹಾವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT