ಪಟ್ನಾ: ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಸಂಸದೆ ವೀಣಾ ದೇವಿ ಅವರು ಎರಡು ಮತದಾರರ ಗುರುತಿನ ಪತ್ರ (ಎಪಿಕ್ ಕಾರ್ಡ್) ಹೊಂದಿದ್ದಾರೆ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಭಾಗವಾಗಿ ಬಿಹಾರದಲ್ಲಿ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯದ್ದು ಎನ್ನಲಾದ ಸ್ಕ್ರೀನ್ಶಾಟ್ಗಳನ್ನು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ವೈಶಾಲಿ ಕ್ಷೇತ್ರದ ಸಂಸದೆ ವೀಣಾದೇವಿ ಅವರು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷದಿಂದ (ರಾಮ್ ವಿಲಾಸ್) ಸ್ಪರ್ಧಿಸಿ ಗೆದ್ದಿದ್ದರು. ‘ಅವರು (ವೀಣಾ ದೇವಿ) ತಮ್ಮದೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದಲ್ಲಿ ನೋಂದಾಯಿತ ಮತದಾರರಾಗಿದ್ದಾರೆ. ಜತೆಗೆ ಮುಜಫ್ಫರ್ಪುರ ವಿಧಾನಸಭಾ ಕ್ಷೇತ್ರದ ಮತದಾರರೂ ಆಗಿದ್ದಾರೆ. ಅವರ ಪತಿ ಜೆಡಿಯು ಪಕ್ಷದ ಎಂಎಲ್ಸಿ ದಿನೇಶ್ ಸಿಂಗ್ ಅವರೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಎಪಿಕ್ ಕಾರ್ಡ್ಗಳನ್ನು ಹೊಂದಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ವೀಣಾ ದೇವಿ ಅವರ ಎರಡು ವಿಭಿನ್ನ ಎಪಿಕ್ ಕಾರ್ಡ್ಗಳು ಬೇರೆ ಬೇರೆ ವಯಸ್ಸನ್ನು ತೋರಿಸುತ್ತವೆ. ಎಸ್ಐಆರ್ನಲ್ಲಿ ಅವರು ಎರಡು ವಿಭಿನ್ನ ಸಹಿಯೊಂದಿಗೆ ಪ್ರತ್ಯೇಕ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿರಬೇಕು. ಅವರು ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಎರಡು ಗುರುತಿನ ಚೀಟಿಗಳನ್ನು ಹೊಂದಿದ್ದು ಹೇಗೆ? ಇದು ಎನ್ಡಿಎ ಗೆಲುವು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗ ನಡೆಸಿರುವ ಅಕ್ರಮ ಅಲ್ಲವೇ? ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.