ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಲಿ, ಮಾಜಿ ಸಂಸದರು, ಶಾಸಕರ ವಿರುದ್ಧ 132 ಇ.ಡಿ ಪ್ರಕರಣ: ಸಂಸತ್ತಿಗೆ ಮಾಹಿತಿ

Published : 6 ಆಗಸ್ಟ್ 2024, 13:31 IST
Last Updated : 6 ಆಗಸ್ಟ್ 2024, 13:31 IST
ಫಾಲೋ ಮಾಡಿ
Comments

ನವದೆಹಲಿ: ಕಳೆದ 6 ವರ್ಷಗಳಲ್ಲಿ ಹಾಲಿ, ಮಾಜಿ ಶಾಸಕರು ಹಾಗೂ ಸಂಸದರ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ(ಇ.ಡಿ) 132 ಹಣ ಅಕ್ರಮ ವರ್ಗಾವಣೆ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಇತರೆ ರಾಜಕೀಯ ವ್ಯಕ್ತಿಗಳನ್ನು ಹೊರತುಪಡಿಸಿದ ಸಂಖ್ಯೆ ಇದಾಗಿದೆ.

ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ ಈ ಕುರಿತಂತೆ ಸಂಸತ್ತಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ತನಿಖೆ ನಡೆಸುತ್ತಿರುವ ಮತ್ತು ತೀರ್ಪು ಆಗಿರುವ ಪ್ರಕರಣಗಳೂ ಇದರಲ್ಲಿವೆ.

2019ರ ಜೂನ್ 1ರಿಂದ ಈ ವರ್ಷದ ಜುಲೈ 31ರವರೆಗೆ ಹಾಲಿ, ಮಾಜಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ರಾಜಕಾರಣಿಗಳ ವಿರುದ್ಧ ದಾಖಲಾಗಿರುವ ಇ.ಡಿ ಪ್ರಕರಣಗಳ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಮಾಹಿತಿ ಪ್ರಕಾರ, 2019ರಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಇ.ಡಿ 15 ಪ್ರಕರಣ ದಾಖಲಿಸಿದೆ. 2020ರಲ್ಲಿ 28, 2021ರಲ್ಲಿ 26, 2022ರಲ್ಲಿ 34, 2023ರಲ್ಲಿ 26, 2024ರಲ್ಲಿ ಜುಲೈ 31ರವರೆಗೆ 3 ಪ್ರಕರಣ ದಾಖಲಾಗಿವೆ.

2020ರ ಮೂರು ಪ್ರಕರಣ ಮತ್ತು 2023ರ 1 ಪ್ರಕರಣದ ವಿಚಾರಣೆ ಮುಗಿದಿದೆ.

2020ರಲ್ಲಿ ಒಂದೇ ಒಂದು ಪ್ರಕರಣದಲ್ಲಿ ಮಾತ್ರ ಶಿಕ್ಷೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT