ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಕುಟುಂಬದ ಉದ್ಧಾರಕ್ಕಾಗಿ ಕಾಂಗ್ರೆಸ್‌ನ ಇಡೀ ಶಕ್ತಿ ವ್ಯಯ: ಪ್ರಧಾನಿ ಮೋದಿ

Published 25 ಫೆಬ್ರುವರಿ 2024, 12:31 IST
Last Updated 25 ಫೆಬ್ರುವರಿ 2024, 12:31 IST
ಅಕ್ಷರ ಗಾತ್ರ

ದೇವಭೂಮಿ ದ್ವಾರಕಾ: ವಿರೋಧ ಪಕ್ಷ ಕಾಂಗ್ರೆಸ್‌ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಒಂದು ಕುಟುಂಬದ ಉದ್ಧಾರಕ್ಕಾಗಿ ಇಡೀ ಶಕ್ತಿಯನ್ನು ವ್ಯಯಿಸಲಾಗುತ್ತಿದೆ’ ಎಂದು ಹೇಳಿದರು.

‘ಕಾಂಗ್ರೆಸ್ ಅವಧಿಯಲ್ಲಿ ಏಲ್ಲಾ ರೀತಿಯ ಹಗರಣಗಳು ನಡೆಯುತ್ತಿದ್ದವು. ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸರ್ಕಾರ ಅವೆಲ್ಲವನ್ನೂ ನಿಲ್ಲಿಸಿದೆ’ ಎಂದು ಹೇಳಿದರು.

ಗುಜರಾತ್‌ನ ದ್ವಾರಕಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶವನ್ನು ದೀರ್ಘಕಾಲ ಆಳಿದದವರಿಗೆ ದೇಶದ ಜನರಿಗೆ ಸೌಲಭ್ಯ ಒದಗಿಸುವ ಶಕ್ತಿ, ಉದ್ದೇಶ ಹಾಗೂ ಸಮರ್ಪಣಾ ಮನೋಭಾವ ಇರಲಿಲ್ಲ’ ಎಂದು ಅವರು ದೂರಿದರು.

‌‘ಎಲ್ಲವನ್ನೂ ಒಂದು ಕುಟುಂಬಕ್ಕಾಗಿ ಮಾಡಿದರು. ಅವರಿಗೆ ದೇಶ ನೆನ‍‍ಪಿರಲು ಹೇಗೆ ಸಾಧ್ಯ? ಐದು ವರ್ಷ ಸರ್ಕಾರ ಹೇಗೆ ನಡೆಸಬೇಕು? ಹಗರಣಗಳನ್ನು ಹೇಗೆ ಮುಚ್ಚಿಡಬೇಕು ಎನ್ನುವುದಕ್ಕೇ ಇಡೀ ಶಕ್ತಿಯನ್ನು ಕಾಂಗ್ರೆಸ್‌ ಪೋಲು ಮಾಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT