ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐರೋಪ್ಯ ಒಕ್ಕೂಟದ ಸಂಸದರ ನಿಯೋಗ ಕಾಶ್ಮೀರಕ್ಕೆ ಬಂದಿದ್ದು 'ಖಾಸಗಿ ಭೇಟಿ': ಕೇಂದ್ರ

Last Updated 20 ನವೆಂಬರ್ 2019, 11:55 IST
ಅಕ್ಷರ ಗಾತ್ರ

ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ಐರೋಪ್ಯಒಕ್ಕೂಟದ ಸಂಸದರ ನಿಯೋಗವು ಕಾಶ್ಮೀರಕ್ಕೆ ಭೇಟಿ ನೀಡಿತ್ತು. ಇದು ಖಾಸಗಿ ಭೇಟಿ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹೇಳಿದೆ.

ಐರೋಪ್ಯಒಕ್ಕೂಟದ 27 ಸಂಸದರ ನಿಯೋಗವು 2019 ಅಕ್ಟೋಬರ್ 28 ರಂದು ಕಾಶ್ಮೀರಕ್ಕೆ ಭೇಟಿ ನೀಡಿತ್ತು. ಇದರಲ್ಲಿ ವಿವಿಧ ಪಕ್ಷಗಳ ಪ್ರತಿನಿಧಿಗಳಿದ್ದರು. ನವೆಂಬರ್ 1ರವರೆಗೆ ಈ ನಿಯೋಗ ಕಾಶ್ಮೀರದಲ್ಲಿತ್ತು. ದೆಹಲಿ ಮೂಲದ ಚಿಂತಕರ ಚಾವಡಿ ಇಂಟರ್‌ನ್ಯಾಷನಲ್ ಇನ್ಸಿಟ್ಯೂಟ್ ಫಾರ್ ನಾನ್‌ಅಲೈನ್‌ಡ್ ಸ್ಟಡೀಸ್ ಈ ನಿಯೋಗವನ್ನು ಕಾಶ್ಮೀರಕ್ಕೆ ಆಮಂತ್ರಿಸಿದ್ದು ಇದು ಖಾಸಗಿ ಭೇಟಿಯಾಗಿತ್ತು ಎಂದು ಕೇಂದ್ರ ಗೃಹಸಚಿವಾಲಯದ ರಾಜ್ಯ ಸಚಿವ ಜಿ.ಕೃಷ್ಣ ರೆಡ್ಡಿ ಅವರು ರಾಜ್ಯಸಭೆಗೆ ಲಿಖಿತ ಉತ್ತರನೀಡಿದ್ದಾರೆ.

ಕಾಶ್ಮೀರಕ್ಕೆ ಯುರೋಪ್ ಸಂಸದರ ನಿಯೋಗ ಭೇಟಿ ನೀಡಿದಾಗ ಅದರಖರ್ಚು ವೆಚ್ಚವನ್ನು ಯಾರು ವಹಿಸಿದ್ದರು ಎಂಬ ಪ್ರಶ್ನೆಗಳಿಗೆ ರೆಡ್ಡಿ ಈ ಉತ್ತರ ನೀಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿಇತರರರು ಮಧ್ಯಪ್ರವೇಶಿಸಬಾರದು ಎಂಬ ನೀತಿಯನ್ನು ಕೇಂದ್ರ ಸರ್ಕಾರ ಅಲ್ಲಗೆಳೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು , ಪಾಕಿಸ್ತಾನದೊಂದಿನ ಮಾತುಕತೆ ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ಮಾತ್ರ ಆಗಲಿದೆ. ಇದರಲ್ಲಿ ಮೂರನೆಯವರುಮಧ್ಯಪ್ರವೇಶಿಸುವಂತಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT