ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇವಿಎಂ ಅನ್‌ಲಾಕ್‌ ಮಾಡಬಹುದು: ವರದಿ ಪ್ರಕಟಿಸಿದ ಪತ್ರಿಕೆ, ಹಲವರ ವಿರುದ್ಧ ದೂರು

Published 30 ಜೂನ್ 2024, 11:18 IST
Last Updated 30 ಜೂನ್ 2024, 11:18 IST
ಅಕ್ಷರ ಗಾತ್ರ

ಮುಂಬೈ: ಇವಿಎಂ ಮತಯಂತ್ರಗಳನ್ನು ಅನ್‌ಲಾಕ್‌ ಮಾಡಬಹುದು ಎಂದು ವರದಿ ಪ್ರಕಟಿಸಿದ್ದ ಮಿಡ್‌ ಡೇ ಪತ್ರಿಕೆ ಹಾಗೂ ಈ ಮಾಹಿತಿಯನ್ನು ಪ್ರಚಾರ ಮಾಡಿದ ಪತ್ರಕರ್ತರು ಹಾಗೂ ರಾಜಕಾರಣಿಗಳ ವಿರುದ್ಧ ದೂರು ದಾಖಲಾಗಿದೆ. 

ಮಿಡ್ ಡೇ ಪತ್ರಿಕೆಯ ವರದಿಗಾರ ಶಿರೀಷ್ ವಕಾತಾನಿಯಾ, ಪತ್ರಕರ್ತ ರಾಜದೀಪ್ ಸರ್ದೇಸಾಯಿ, ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ, ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಶ್ರೀನಾತೆ, ಎನ್​ಸಿಪಿ ಶಾಸಕ ಜಿತೇಂದ್ರ ಅಹ್ವಾದ್, ಯುಟ್ಯೂಬರ್ ಧ್ರುವ್ ರಾಠೀ, ಕಾಂಗ್ರೆಸ್ ನಾಯಕ ಸರಳ್ ಪಟೇಲ್ ಮತ್ತು ಅರ್ಪಿತ್ ಶರ್ಮಾ ಅವರ ವಿರುದ್ಧವೂ ದೂರು ದಾಖಲಿಸಲಾಗಿದೆ.

ಮಿಡ್ ಡೇ ಪತ್ರಿಕೆ ಹಾಗೂ ಮೇಲಿನ ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅಡ್ವೋಕೇಟ್ ವಿವೇಕಾನಂದ್ ದಯಾನಂದ್ ಗುಪ್ತಾ ಮನವಿ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರವನ್ನು ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಜೂನ್ 16ರಂದು ಮಿಡ್ ಡೇ ಪತ್ರಿಕೆಯಲ್ಲಿ ಇವಿಎಂ ಮತಯಂತ್ರಗಳನ್ನು ಮೊಬೈಲ್‌ ಮೂಲಕ ಅನ್‌ಲಾಕ್‌ ಮಾಡಬಹುದು ಎಂದು ವರದಿ ಪ್ರಕಟಿಸಲಾಗಿತ್ತು. ಈ ವರದಿಯನ್ನು ಬೆಂಬಲಿಸಿ ಹಲವರು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಪತ್ರಿಕೆ ಹಾಗೂ ಸುದ್ದಿ ವಾಹಿನಿಗಳಲ್ಲಿ ವರದಿ ಪ್ರಕಟಿಸಿದ್ದರು. 

ಇಲ್ಲಿನ ರಾಜಕಾರಣಿಗಳು ಸಹ ಈ ವರದಿಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು. ಇದೀಗ ಇವರ ವಿರುದ್ಧ ದೂರ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT