ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರ್ತ್ಯಸೆನ್‌ಗೆ ಮಾನಸಿಕ ಕಿರುಕುಳ: ವಿಶ್ವಭಾರತಿ ಕುಲಪತಿ ವಿರುದ್ಧ ದೂರು

Published 26 ಏಪ್ರಿಲ್ 2023, 13:09 IST
Last Updated 26 ಏಪ್ರಿಲ್ 2023, 13:09 IST
ಅಕ್ಷರ ಗಾತ್ರ

ಕೋಲ್ಕತ್ತ: ಜಾಗ ತೆರವು ವಿಚಾರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೆನ್ ಅವರಿಗೆ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ವಿಶ್ವಭಾರತಿ ವಿಶ್ವವಿದ್ಯಾಲಯ ಉಪ ಕುಲಪತಿ ವಿದ್ಯುತ್ ಚಕ್ರವರ್ತಿಮತ್ತು ಇತರ ಇಬ್ಬರು ಅಧಿಕಾರಿಗಳ ವಿರುದ್ಧ ವಿದ್ಯಾಲಯದ ಮಾಜಿ ವಿದ್ಯಾರ್ಥಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. 

‘ಅಮರ್ತ್ಯ ಸೆನ್ ಅವರಂಥ ವ್ಯಕ್ತಿತ್ವವನ್ನು ಭೂಗಳ್ಳ, ಅತಿಕ್ರಮಣದಾರ ಎಂದು ಕರೆುಯುವ ಮೂಲಕ ಮೌಖಿಕವಾಗಿ ನಿಂದಿಸಲಾಗಿದೆ. ಈ ರೀತಿಯ ಮಾನಸಿಕ ಕಿರುಕಳ ನೀಡಿದವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ದೂರುದಾರರಾದ ತ್ರಿಶಾರಾಣಿ ಭಟ್ಟಾಚಾರ್ಯ ಅವರು ಆಗ್ರಹಿಸಿದ್ದಾರೆ.

ಈ ಸಂಬಂಧ ಬಿರ್‌ಭೂಮ್‌ ಜಿಲ್ಲೆಯ ಶಾಂತಿನಿಕೇತನ ಪೊಲೀಸ್‌ ಠಾಣೆಯ ಪ್ರಭಾರ ಅಧಿಕಾರಿಗೆ ಪತ್ರ ಬರೆದಿರುವ ತ್ರಿಶಾರಾಣಿ, ಪ್ರಕರಣದಲ್ಲಿ ಉಪ ರಿಜಿಸ್ಟ್ರಾರ್ ಅಶೋಕ್ ಮಹತೊ ಮತ್ತು ವಿಶ್ವವಿದ್ಯಾಲಯದ ವಕ್ತಾರ ಮಹುವ ಬಂಡೋಪಾಧ್ಯಾಯ ಅವರ ವಿರುದ್ಧವೂ ಆರೋಪ ಮಾಡಿದ್ದಾರೆ. 

‘ಮಂಗಳವಾರ ಸಂಜೆ ದೂರನ್ನು ಸ್ವೀಕರಿಸಲಾಗಿದೆ’ ಎಂಬುದಾಗಿ ಶಾಂತಿನಿಕೇತನ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. 

ಈ ಕುರಿತು ವಿಶ್ವವಿದ್ಯಾಲಯದ ವಕ್ತಾರ ಬಂಡೋಪಾಧ್ಯಾಯ ಅವರನ್ನು ಕೇಳಿದಾಗ ‘ಈ ವಿಚಾರಲ್ಲಿ ನಾವು ಏನೂ ಹೇಳುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. 

‘ಅಮರ್ತ್ಯ ಸೆನ್‌ ಅವರು ಒತ್ತುವರಿ ಮಾಡಿಕೊಂಡಿರುವ ವಿಶ್ವಭಾರತಿ ವಿಶ್ವವಿದ್ಯಾಲಯದ ಜಾಗವನ್ನು ಮೇ 6ರ ಒಳಗೆ ಅಥವಾ ನೋಟಿಸ್‌ ಪಡೆದ 15 ದಿನಗಳ ಒಳಗೆ  ತೆರವು ಮಾಡಬೇಕು’ ಎಂದು ವಿಶ್ವವಿದ್ಯಾಲಯವು ಇದೇ 19ರಂದು ನೀಡಿದ ನೋಟಿಸ್‌ನಲ್ಲಿ ತಿಳಿಸಿತ್ತು.

ಒತ್ತುವರಿ ಜಾಗವನ್ನು ಅಮರ್ತ್ಯ ಸೆನ್‌ ಅವರು ತೆರವು ಮಾಡಬೇಕು. ಇಲ್ಲವಾದಲ್ಲಿ ಬಲವಂತದಿಂದ ತೆರವು ಕಾರ್ಯಾಚರಣೆ ನಡೆಸುವುದಾಗಿಯೂ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

‘ವಿಶ್ವವಿದ್ಯಾಲಯದ ಆವರಣದ 1.25 ಎಕರೆ ಪ್ರದೇಶವನ್ನು ಮಾತ್ರವೇ ಅಮರ್ತ್ಯ ಸೆನ್‌ ಅವರು ಬಳಸಿ ಕೊಳ್ಳಬಹುದಾಗಿದೆ. ಇಷ್ಟು ಜಾಗವನ್ನು ಸೆನ್‌ ಅವರ ತಂದೆ ಗುತ್ತಿಗೆಗೆ ಪಡೆದುಕೊಂಡಿದ್ದರು. ಆದರೆ, ಸೆನ್‌ ಅವರು ಒಟ್ಟು 1.38 ಎಕರೆ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಅಲ್ಲಿಗೆ 5,662.8 ಚದರ ಅಡಿ ಹೆಚ್ಚುವರಿ ಜಾಗವನ್ನು ಸೆನ್‌ ಅವರು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು
ವಿಶ್ವವಿದ್ಯಾಲಯದ ಉಪ ರಿಜಿಸ್ಟ್ರಾರ್‌ ಅಶೋಕ್ ಮಹತೊ ತಿಳಿಸಿದ್ದಾರೆ.

‘1.25 ಎಕರೆ ಜಾಗವನ್ನು ನನ್ನ ತಂದೆ ವಿಶ್ವವಿದ್ಯಾಲಯದಿಂದ ಗುತ್ತಿಗೆ ಪಡೆದಿದ್ದರು. 5,662.8 ಚದರ ಅಡಿ ಹೆಚ್ಚುವರಿ ಜಾಗವನ್ನು ನನ್ನ ತಂದೆಯು ವಿಶ್ವವಿದ್ಯಾಲಯದಿಂದ ಖರೀದಿ ಮಾಡಿದ್ದರು. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ’ ಎಂದು ಅಮರ್ತ್ಯ ಸೆನ್‌ ಅವರು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT