ರೌರ್ಕೆಲಾ: ಒಡಿಶಾದ ಸುಂದರಗಢ ಜಿಲ್ಲೆಯಲ್ಲಿ ಕಲ್ಲು ಕ್ವಾರಿಗೆ ಸ್ಫೋಟಕ ಸಾಗಿಸುತ್ತಿದ್ದ ಲಾರಿಯನ್ನು ಶಂಕಿತ ಮಾವೋವಾದಿಗಳು ಮಂಗಳವಾರ ಲೂಟಿ ಮಾಡಿದ್ದಾರೆ.
.ಛತ್ತೀಸಗಢ: ಭದ್ರತಾ ಸಿಬ್ಬಂದಿ ಮುಂದೆ ಶರಣಾದ 18 ನಕ್ಸಲರು.
ಕೆ. ಬಲಾಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡು ದಾರಿಯಲ್ಲಿ ಸುಮಾರು 200 ಪೊಟ್ಟಣ ಜಿಲೆಟಿನ್ ಸಾಗಿಸುತ್ತಿದ್ದ ಲಾರಿಯನ್ನು ಶಸ್ತ್ರಸಜ್ಜಿತ, ಮುಸುಕುಧಾರಿ ಗುಂಪೊಂದು ಅಡ್ಡಗಟ್ಟಿ ಲೂಟಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಜಾರ್ಖಂಡ್ನ ಪೂರ್ವ ಸಿಂಗ್ಭುಮ್ನ ಸರಾಂಡ ಅರಣ್ಯದ ಸಮೀಪ ಘಟನೆ ನಡೆದಿದ್ದು, ನಕ್ಸಲ್ ಪೀಡಿತ ಪ್ರದೇಶವೂ ಹೌದು.

ಸ್ಫೋಟಕ ತುಂಬಿದ್ದ ಲಾರಿಯು ಬಂಕೊದಿಂದ ಬಡಂಗಾವ್ಗೆ ತೆರಳುತ್ತಿತ್ತು.
.ಛತ್ತೀಸಗಢ: ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ನಕ್ಸಲರು ಹತ.
ಚಾಲಕನ ಹಣೆಗೆ ಬಂದೂಕು ಇರಿಸಿ ಲಾರಿಯಲ್ಲಿದ್ದ ಸ್ಫೋಟಕಗಳನ್ನು ದೋಚಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಹಿತಿ ಬಯಸಿ ಒಡಿಶಾ ಡಿಜಿಪಿ ವೈ.ಬಿ. ಖುರಾನಿಯಾ ಅವರನ್ನು ಸಂಪರ್ಕಿಸಲಾಗಿದ್ದು, ಘಟನೆಯಲ್ಲಿ ಮಾವೋವಾದಿಗಳ ಕೈವಾಡವನ್ನು ಅವರು ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲ.
.ಛತ್ತೀಸಗಢ | ದಂಪತಿ ಸೇರಿದಂತೆ 19 ನಕ್ಸಲರು ಶರಣು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.