ಮೇದಿನಿನಗರ: ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ ಕದ್ದು ₹27 ಲಕ್ಷಕ್ಕೆ ಮಾರಾಟ ಮಾಡಿದ್ದ ಹೆಣ್ಣು ಆನೆಯನ್ನು ಬಿಹಾರದ ಛಪ್ರಾ ಜಿಲ್ಲೆಯಲ್ಲಿ ರಕ್ಷಿಸಲಾಗಿದೆ.

ಜಾರ್ಖಂಡ್ನ ಚುಕುರ್ ಪ್ರದೇಶದಲ್ಲಿ ‘ಜಯಮತಿ’ ಎಂಬ ಹೆಣ್ಣಾನೆಯನ್ನು ಸೆ.12ರಂದು ಕಳವು ಮಾಡಿರುವ ಕುರಿತು ಉತ್ತರ ಪ್ರದೇಶದ ಮಿರ್ಜಾಪುರ ನಿವಾಸಿ ನರೇಂದ್ರ ಕುಮಾರ್ ಶುಕ್ಲಾ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.

ಶುಕ್ಲಾ ಅವರು ರಾಂಚಿಯಲ್ಲಿ ₹40 ಲಕ್ಷ ನೀಡಿ ಆನೆಯನ್ನು ಖರೀದಿಸಿದ್ದರು.

ಕಳವಾಗಿದ್ದ ಆನೆಯು ಬಿಹಾರದ ಛಪ್ರಾ ಜಿಲ್ಲೆಯ ಪಹಾಢಪುರದಲ್ಲಿ ಇರುವ ಕುರಿತು ಸೋಮವಾರ ಮಾಹಿತಿ ಸಿಕ್ಕಿತು. ಬಿಹಾರ ಪೊಲೀಸರ ನೆರವಿನೊಂದಿಗೆ ಆನೆಯನ್ನು ರಕ್ಷಿಸಲಾಯಿತು. ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧಿಸಿಲ್ಲ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೇದಿನಿನಗರದ ಎಸ್ಡಿಪಿಒ ಮಣಿಭೂಷಣ್ ಪ್ರಸಾದ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.