ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯನ್ನು ‘ಮೈಲುಗಲ್ಲು’ ಎಂದು ಬಿಜೆಪಿ ಶುಕ್ರವಾರ ಶ್ಲಾಘಿಸಿದೆ. ಅಲ್ಲದೆ ಮೋದಿ ಪ್ರವಾಸವನ್ನು ಟೀಕಿಸಿದ ರಾಹುಲ್ ಗಾಂಧಿ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪ್ರಧಾನಿಯವರ ವಿದೇಶ ಪ್ರವಾಸಗಳಲ್ಲಿ ತಪ್ಪು ಹುಡುಕುವುದು ಕಾಂಗ್ರೆಸ್ ನಾಯಕರ ಅಭ್ಯಾಸವಾಗಿದೆ ಎಂದು ಹೇಳಿದೆ.
.PHOTOS | ಅಮೆರಿಕದಲ್ಲಿ ಮೋದಿ-ಟ್ರಂಪ್ ಭೇಟಿ, ಮಾತುಕತೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ‘ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವಶಾಲಿ ಅಮೆರಿಕ ಭೇಟಿ ಭಾರತ-ಅಮೆರಿಕ ಬಾಂಧವ್ಯವನ್ನು ಹಿಂದೆಂದಿಗಿಂತಲೂ ಗಟ್ಟಿಗೊಳಿಸಿದೆ’ ಎಂದು ಬರೆದಿದ್ದಾರೆ.

ಮೋದಿಯವರ ಭೇಟಿ ಹೆಗ್ಗುರುತಿನದ್ದು ಎಂದು ಬಣ್ಣಿಸಿದ್ದಾರೆ. ‘26/11 ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದು, ಭಾರತಕ್ಕೆ ಲಭಿಸಿದ ದೊಡ್ಡ ರಾಜತಾಂತ್ರಿಕ ಗೆಲುವು’ ಎಂದು ಶಹನವಾಜ್ ಅಭಿಪ್ರಾಯಪಟ್ಟಿದ್ದಾರೆ.
.Modi In USA: ಬಾಂಗ್ಲಾದೇಶ ಪರಿಸ್ಥಿತಿಯ ಬಗ್ಗೆ ಮೋದಿ–ಟ್ರಂಪ್ ಚರ್ಚೆ .
ಉದ್ಯಮಿ ಗೌತಮ್ ಅದಾನಿ ಅವರ ಭ್ರಷ್ಟಾಚಾರವನ್ನು ಮೋದಿ ಮುಚ್ಚಿಹಾಕಿದ್ದಾರೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿರುವ ಶಹನವಾಜ್, ‘ಮೋದಿ ಅವರು ಬಿಜೆಪಿ ನಾಯಕನಾಗಿ ಅಲ್ಲ, ದೇಶದ ಪ್ರಧಾನಿಯಾಗಿ, 140 ಕೋಟಿ ಜನರ ನಾಯಕನಾಗಿ ಅಮೆರಿಕಕ್ಕೆ ಭೇಟಿ ನೀಡಿದ್ದರು ಎಂಬುದನ್ನು ಕಾಂಗ್ರೆಸ್ ನಾಯಕರು ನೆನಪಿನಲ್ಲಿಟ್ಟುಕೊಳ್ಳಬೇಕು.ಪ್ರಧಾನಿಯವರ ವಿದೇಶಿ ಭೇಟಿಗಳಲ್ಲಿ ತಪ್ಪುಗಳನ್ನು ಕಂಡುಹಿಡಿಯುವುದು ಕಾಂಗ್ರೆಸ್ನ ಅಭ್ಯಾಸವಾಗಿದೆ’ ಎಂದು ಹೇಳಿದ್ದಾರೆ.

ಅಮೆರಿಕ ಭೇಟಿ ವೇಳೆ ಅದಾನಿ ವಿಷಯದಲ್ಲಿ ಕೇಳಲಾದ ಪ್ರಶ್ನೆಗೆ ಪ್ರಧಾನಿ ಮೋದಿ ನೀಡಿದ ಉತ್ತರದ ಬಗ್ಗೆ ಟೀಕಿಸಿದ್ದ ರಾಹುಲ್, ದೇಶದಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಮೋದಿ ಮೌನ ವಹಿಸುತ್ತಾರೆ. ವಿದೇಶದಲ್ಲಿ ಕೇಳಿದಾಗ ಅದು ವೈಯಕ್ತಿಕ ವಿಚಾರ ಎಂದು ಹೇಳಿ ಸುಮ್ಮನಾಗುತ್ತಾರೆ’ ಎಂದು ಹೇಳಿದ್ದರು.
.Modi-Trump Talks Highlights: ಮೋದಿ-ಟ್ರಂಪ್ ಭೇಟಿಯ ಮುಖ್ಯಾಂಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.