ವಾಷಿಂಗ್ಟನ್: ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ವ್ಯವಸ್ಥೆಯ ಬಲವರ್ಧನೆ, ವಾಣಿಜ್ಯ-ವ್ಯಾಪಾರ, ಇಂಧನ, ಮೂಲಸೌಕರ್ಯ, ತಂತ್ರಜ್ಞಾನ ವೃದ್ಧಿ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಿದ್ದಾರೆ.

ಭಾರತ-ಅಮೆರಿಕ ಬಾಂಧವ್ಯ ವೃದ್ಧಿ, ಜಾಗತಿಕ ಸನ್ನಿವೇಶ ಸೇರಿದಂತೆ ಹಲವು ಮಹತ್ವದ ವಿಷಯಗಳ ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದು, ಉಭಯ ನಾಯಕರೂ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ಮೋದಿ-ಟ್ರಂಪ್ ಭೇಟಿ, ಮಾತುಕತೆಯ ಮುಖ್ಯಾಂಶಗಳು:

ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರ:

2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿ (26/11) ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ಆರೋಪಿ, ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹವ್ವುರ್ ರಾಣಾನನ್ನು ಭಾರತಕ್ಕೆ ಒಪ್ಪಿಸಲು ಅಮೆರಿಕ ಒಪ್ಪಿಗೆ ಸೂಚಿಸಿದೆ. ಈ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ ಮಾಡಿದ್ದಾರೆ.

'ಇಸ್ಲಾಮಿಕ್ ಭಯೋತ್ಪಾದನೆ' ವಿರುದ್ಧ ಹೋರಾಟ:

ಹಿಂದೆಂದಿಗಿಂತಲೂ ಜಗತ್ತಿನಾದ್ಯಂತ ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತ ಮತ್ತು ಅಮೆರಿಕ ಒಗ್ಗಟ್ಟಾಗಿ ಕೆಲಸ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಭಾರತಕ್ಕೆ ಅಮೆರಿಕದ 'F-35 ಯುದ್ಧ ವಿಮಾನ':

'ಈ ವರ್ಷದಿಂದ ಭಾರತಕ್ಕೆ ನಾವು ಮಿಲಿಟರಿ ಮಾರಾಟವನ್ನು ಹಲವು ಶತಕೋಟಿ ಡಾಲರ್ಗಳಷ್ಟು ಹೆಚ್ಚಿಸಲಿದ್ದೇವೆ. ಮಿಲಿಟರಿ ಕ್ಷೇತ್ರದ ಬಲವರ್ಧನೆಯ ಭಾಗವಾಗಿ ಅಮೆರಿಕದ ಅತ್ಯಾಧುನಿಕ ಎಫ್-35 ಯುದ್ಧ ವಿಮಾನಗಳನ್ನು ಭಾರತಕ್ಕೆ ಒದಗಿಸಲಾಗುವುದು' ಎಂದು ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಇದರೊಂದಿಗೆ ರಕ್ಷಣಾ ಕ್ಷೇತ್ರಕ್ಕೆ ಭಾರಿ ಉತ್ತೇಜನ ಲಭಿಸಲಿದೆ.
.ಭಾರತ-ಅಮೆರಿಕ ಬಾಂಧವ್ಯ ವೃದ್ಧಿ: ಮೋದಿ-ಟ್ರಂಪ್ ಭೇಟಿ, ಮಾತುಕತೆ.ಮಿಲಿಟರಿ, ಇಂಧನ ಕ್ಷೇತ್ರದಲ್ಲಿ ಬಲವರ್ಧನೆ: ಭಾರತಕ್ಕೆ ಅಮೆರಿಕದ F-35 ಯುದ್ಧ ವಿಮಾನ.
ಮಿಲಿಟರಿ, ಇಂಧನ ಕ್ಷೇತ್ರದಲ್ಲಿ ಬಲವರ್ಧನೆ:

'ವಿಶ್ವದ ಅತ್ಯಂತ ಹಳೆಯ' ಮತ್ತು 'ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ' ದೇಶಗಳ ನಡುವೆ 'ವಿಶೇಷ ಬಾಂಧವ್ಯ' ಇವೆ. ರಕ್ಷಣಾ, ಇಂಧನ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವುದರತ್ತ ಉಭಯ ರಾಷ್ಟ್ರಗಳು ಬದ್ಧವಾಗಿವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇಂಧನ ವಲಯದಲ್ಲೂ ಭಾರತದ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಟ್ರಂಪ್ ತಿಳಿಸಿದರು. ಆ ಮೂಲಕ 'ಅಮೆರಿಕ ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ಮಾಡುವ ಮುಂಚೂಣಿ ದೇಶವೆನಿಸಲಿದೆ' ಎಂದು ಅವರು ಉಲ್ಲೇಖಿಸಿದರು.

'ಇತರೆ ದೇಶಗಳಿಗಿಂತ ಹೆಚ್ಚಿನ ತೈಲ ಮತ್ತು ಅನಿಲವನ್ನು ನಾವು ಹೊಂದಿದ್ದೇವೆ. ಭಾರತಕ್ಕೂ ಅದರ ಅಗತ್ಯವಿದೆ. ನಮ್ಮ ಬಳಿ ಹೇರಳವಾಗಿ ಇದೆ' ಎಂದು ಟ್ರಂಪ್ ಹೇಳಿದ್ದಾರೆ.

'ಭಾರತ-ಮಧ್ಯಪ್ರಾಚ್ಯ-ಯುರೋಪ್' ಆರ್ಥಿಕ ಕಾರಿಡಾರ್:

ಅತ್ಯಂತ ಮಹತ್ವಾಕಾಂಕ್ಷೆಯ 'ಭಾರತ-ಮಧ್ಯಪ್ರಾಚ್ಯ-ಯುರೋಪ್' ಆರ್ಥಿಕ ಕಾರಿಡಾರ್ ಕುರಿತು ಪ್ರಸ್ತಾಪಿಸಿದ ಟ್ರಂಪ್, 'ಉಭಯ ದೇಶಗಳು ಐತಿಹಾಸಿಕ 'ಶ್ರೇಷ್ಠವಾದ ವ್ಯಾಪಾರ ಮಾರ್ಗ' ನಿರ್ಮಿಸಲು ಬದ್ಧರಾಗಿದ್ದೇವೆ' ಎಂದು ಹೇಳಿದ್ದಾರೆ.

'ಅಮೆರಿಕದ ಪರಮಾಣು ತಂತ್ರಜ್ಞಾನಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಭಾರತವು ತನ್ನ ಕಾನೂನುಗಳನ್ನು ಸುಧಾರಿಸುತ್ತಿದೆ' ಎಂದೂ ಟ್ರಂಪ್ ತಿಳಿಸಿದರು.

ನಿಕಟ ಭವಿಷ್ಯದಲ್ಲಿ ಬೃಹತ್ ವ್ಯಾಪಾರ ಒಪ್ಪಂದ ಘೋಷಣೆ:

ನಾವು ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ನಿಕಟ ಭವಿಷ್ಯದಲ್ಲೇ ಬೃಹತ್ ವ್ಯಾಪಾರ ಒಪ್ಪಂದಗಳನ್ನು ಘೋಷಿಸಲಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.

ಉತ್ತಮ ಜಗತ್ತನ್ನು ರೂಪಿಸಲು ಭಾರತ-ಅಮೆರಿಕ ಸಹಕಾರ:

ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಮತ್ತಷ್ಟು ಆವೇಗದಿಂದ ಕೆಲಸ ಮಾಡುವ ವಿಶ್ವಾಸವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ. ಭಾರತ ಹಾಗೂ ಅಮೆರಿಕ ನಡುವಿನ ಸಹಕಾರವು ಉಭಯ ರಾಷ್ಟ್ರಗಳ ಪ್ರಗತಿಯ ಜೊತೆಗೆ ಉತ್ತಮ ಜಗತ್ತನ್ನು ರೂಪಿಸಲಿದ್ದು, ಸಮೃದ್ಧಿಯತ್ತ ಸಾಗಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

'ಟ್ರಂಪ್ ಯಾವಾಗಲೂ ಅಮೆರಿಕದ ಹಿತಾಸಕ್ತಿಯನ್ನು ಕಾಪಾಡಲು ಹೆಚ್ಚಿನ ಆದ್ಯತೆ ನೀಡುತ್ತಾರೆ. ನಾನು ಸಹ ಎಲ್ಲದಕ್ಕೂ ಮಿಗಿಲಾಗಿ ಭಾರತದ ಹಿತಾಸಕ್ತಿ ಕಾಪಾಡಲು ಬಯಸುತ್ತೇನೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಟ್ರಂಪ್ ಅವರ 'ಮೇಕ್ ಅಮೆರಿಕ ಗ್ರೇಟ್ ಎಗೈನ್' ಹೇಳಿಕೆಯು ನಮಗೂ ಸ್ಫೂರ್ತಿ ನೀಡುತ್ತದೆ. 2047ರಲ್ಲಿ ಭಾರತವು 100 ವರ್ಷಗಳ ಸ್ವಾತಂತ್ರ್ಯವನ್ನು ಪೂರ್ಣಗೊಳಿಸುವಾಗ 'ವಿಕಸಿತ ಭಾರತ'ದ ಸಂಕಲ್ಪದತ್ತ ಬದ್ಧರಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಹೇಳಿದ್ದೇನು?

'ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧವನ್ನು ನಿಲ್ಲಿಸಲು ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನಗಳನ್ನು ನಾನು ಬೆಂಬಲಿಸುತ್ತೇನೆ. ಯುದ್ಧದ ಕುರಿತು ಭಾರತ ತಟಸ್ಥ ನಿಲುವನ್ನು ಹೊಂದಿದೆ ಎಂದು ಜಗತ್ತು ಭಾವಿಸುತ್ತದೆ. ಆದರೆ ಭಾರತ ತಟಸ್ಥವಾಗಿಲ್ಲ. ಭಾರತವು ಶಾಂತಿಯ ಪರವಾಗಿದೆ' ಎಂದು ಮೋದಿ ಪುನರುಚ್ಚರಿಸಿದರು.

'ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದಾಗಲೂ ಇದನ್ನೇ ಹೇಳಿದ್ದೇನೆ. ಇದು ಯುದ್ಧದ ಯುಗವಲ್ಲ. ಯುದ್ಧಭೂಮಿಯಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ಕುಳಿತು ಚರ್ಚಿಸಿದಾಗ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ' ಎಂದು ಹೇಳಿದ್ದಾರೆ.

ಮೋದಿ ನನ್ನ ದೀರ್ಘಕಾಲದ ಸ್ನೇಹಿತ: ಟ್ರಂಪ್

ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡು ಬರಮಾಡಿಕೊಂಡಿರುವ ಟ್ರಂಪ್, 'ನಿಮ್ಮನ್ನು ಭೇಟಿಯಾಗಲು ಖುಷಿಯಾಗುತ್ತಿದೆ. ನೀವು ನನ್ನ ದೀರ್ಘಕಾಲದ ಉತ್ತಮ ಸ್ನೇಹಿತ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ' ಎಂದು ಹೇಳಿದ್ದಾರೆ. ಉಭಯ ನಾಯಕರೂ ಟ್ರಂಪ್ ಮೊದಲ ಅವಧಿಯಲ್ಲಿ ಭಾರತ-ಅಮೆರಿಕ ಉತ್ತಮ ಬಾಂಧವ್ಯದ ಕುರಿತಾಗಿಯೂ ಮೆಲುಕು ಹಾಕಿದ್ದಾರೆ.

ಮೋದಿಗೆ 'ಅವರ್ ಜರ್ನಿ ಟುಗೇದರ್' ಪುಸ್ತಕ ಉಡುಗೊರೆ...

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಅವರ್ ಜರ್ನಿ ಟುಗೇದರ್' ಪುಸ್ತಕವನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದರು. ಈ ವೇಳೆ 'ಹೌಡಿ ಮೋಡಿ' ಹಾಗೂ 'ನಮಸ್ತೆ ಟ್ರಂಪ್' ಕಾರ್ಯಕ್ರಮದ ಹಲವು ಚಿತ್ರಗಳನ್ನು ಟ್ರಂಪ್ ತೋರಿಸಿಕೊಟ್ಟರು.

ಬೈಡನ್ ಆಡಿಳಿತದಲ್ಲಿ ಉತ್ತಮ ಬಾಂಧವ್ಯ ಇರಲಿಲ್ಲ: ಟ್ರಂಪ್

'ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಆಡಳಿತದೊಂದಿಗೆ ಭಾರತವು ಉತ್ತಮ ಬಾಂಧವ್ಯವನ್ನು ಹೊಂದಿತ್ತು ಎಂದು ನಾನು ಭಾವಿಸುವುದಿಲ್ಲ. ಭಾರತ ಹಾಗೂ ಬೈಡನ್ ಆಡಳಿತದ ನಡುವೆ ಹೊಂದಿಕೆಯಲ್ಲದ ಹಲವು ಸಂಗತಿಗಳು ನಡೆದಿವೆ. ಆದರೆ ಈಗ ಹಿಂಸಾತ್ಮಕ ವ್ಯಕ್ತಿಯೊಬ್ಬರನ್ನು ಭಾರತಕ್ಕೆ ಹಸ್ತಾಂತರಿಸುತ್ತಿದ್ದೇವೆ' ಎಂದು ರಾಣಾ ಹಸ್ತಾಂತರದ ಕುರಿತು ಟ್ರಂಪ್ ಹೇಳಿದರು.

ಭಾರತದ ರಕ್ಷಣಾ ವ್ಯವಸ್ಥೆಯದಲ್ಲಿ ಅಮೆರಿಕದ ಪಾತ್ರ:

'ಭಾರತದ ರಕ್ಷಣಾ ವ್ಯವಸ್ಥೆ, ಸನ್ನದ್ಧತೆಯಲ್ಲಿ ಅಮೆರಿಕವು ನಿರ್ಣಾಯಕ ಪಾತ್ರವನ್ನು ಹೊಂದಿದೆ. ಭಾರತ-ಅಮೆರಿಕ ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಿ ಜಂಟಿ ಅಭಿವೃದ್ಧಿ, ಜಂಟಿ ಉತ್ಪಾದನೆ ಮತ್ತು ತಂತ್ರಜ್ಞಾನ ಹಂಚಿಕೆಯ ವಿಷಯದಲ್ಲಿ ನಾವು ಸಕ್ರಿಯವಾಗಿ ಮುನ್ನಡೆಯುತ್ತೇವೆ. ಭವಿಷ್ಯದಲ್ಲಿ ಹೊಸ, ತಂತ್ರಜ್ಞಾನ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲಿದ್ದೇವೆ. ಮುಂದಿನ ದಶಕದಲ್ಲಿ ರಕ್ಷಣಾ ಸಹಕಾರದ ಚೌಕಟ್ಟು ರಚನೆಯಾಗಲಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅಮೆರಿಕದಿಂದ ಅಕ್ರಮವಾಗಿ ನೆಲೆಸಿದ್ದ ಭಾರತೀಯರ ಗಡೀಪಾರು ಕುರಿತು:

'ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ ಭಾರತೀಯರನ್ನು ವಾಪಾಸ್ ಕಳುಹಿಸಿದ್ದರ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಈ ಪ್ರಶ್ನೆ ಕೇವಲ ಭಾರತಕ್ಕಷ್ಟೇ ಸೀಮಿತವಲ್ಲ. ಬೇರೆ ದೇಶಗಳಲ್ಲಿ ಅಕ್ರಮವಾಗಿ ವಾಸಿಸುವವರಿಗೂ ಅನ್ವಯಿಸುತ್ತದೆ. ಅವರಿಗೆ ಅಲ್ಲಿ ವಾಸಿಸುವ ಹಕ್ಕಿಲ್ಲ. ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ಸ್ವೀಕರಿಸಲು ಭಾರತ ಯಾಗಾವಲೂ ಸಿದ್ಧವಿದೆ ಎಂದು ಹೇಳುತ್ತಲೇ ಬಂದಿದ್ದೇವೆ. ಅವರೆಲ್ಲರೂ ಸಾಮಾನ್ಯ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅವರನ್ನು ದಾರಿ ತಪ್ಪಿಸಿ ಅಮೆರಿಕಕ್ಕೆ ಕರೆದೊಯ್ಯಲಾಗಿದೆ. ಅದಕ್ಕಾಗಿಯೇ ನಾವು ಮಾನವ ಕಳ್ಳಸಾಗಣೆಯ ವ್ಯವಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ' ಎಂದು ಹೇಳಿದ್ದಾರೆ.
.ಮುಂಬೈ ದಾಳಿಯ ಆರೋಪಿ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸಮ್ಮತಿ.Ukraine–Russia War: ಪುಟಿನ್ ಮಾತು ನಂಬಬೇಡಿ; ವಿಶ್ವ ನಾಯಕರಿಗೆ ಝೆಲೆನ್ಸ್ಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.