ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೈತ್‌ನಲ್ಲಿ ಅಗ್ನಿ ಅನಾಹುತ: ಕಾಸರಗೋಡಿನ ಇಬ್ಬರು ಸಾವು

Published 13 ಜೂನ್ 2024, 19:48 IST
Last Updated 13 ಜೂನ್ 2024, 19:48 IST
ಅಕ್ಷರ ಗಾತ್ರ

ಕಾಸರಗೋಡು: ಕುವೈತ್‌ನಲ್ಲಿ ಕಟ್ಟಡಕ್ಕೆ ಬೆಂಕಿ ತಗುಲಿ ಸಂಭವಿಸಿದ ಅನಾಹುತದಲ್ಲಿ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದಾರೆ.

ಚೆರ್ಕಳ ಕುಂಟಡ್ಕ ನಿವಾಸಿ ರಂಜಿತ್ (34) ಮತ್ತು ತ್ರಿಕರಿಪುರ ಎಳಂಬಚ್ಚಿ ನಿವಾಸಿ ಕೇಳು ಪೊನ್ಮಲೇರಿ (55) ಮೃತಪಟ್ಟವರು. ಈ ಸಂಬಂಧ ಜಿಲ್ಲಾ ಪೊಲೀಸ್ ಮಾಹಿತಿ ಕೇಂದ್ರಕ್ಕೆ ಮಾಹಿತಿ ಬಂದಿದೆ.

ರಂಜಿತ್ ಅವರು ಕುಂಟಡ್ಕದ ರವೀಂದ್ರನ್-ರಮಣಿ ದಂಪತಿ ಪುತ್ರ. 10 ವರ್ಷಗಳಿಂದ ಕುವೈತ್‌ನಲ್ಲಿ ನೌಕರಿಯಲ್ಲಿದ್ದರು. ಕೇಳು ಅವರೂ 10 ವರ್ಷಗಳಿಂದ ಕುವೈತ್‌ನ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT