‘ಡಿ.31ರ ಒಳಗೆ ಗಡಿ ನಿಗದಿಪಡಿಸಿ’
ಆಡಳಿತಾತ್ಮಕ ಪ್ರದೇಶಗಳ ಗಡಿಗಳಲ್ಲಿ ಬದಲಾವಣೆ ಪ್ರಸ್ತಾವಗಳಿದ್ದರೆ 2025ರ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಿಜಿಸ್ಟ್ರಾರ್ ಜನರಲ್ ಸೂಚಿಸಿದ್ದಾರೆ. ‘ಜನಗಣತಿ ಪ್ರಕ್ರಿಯೆಗಾಗಿ ಎಲ್ಲ ಗ್ರಾಮಗಳು ಮತ್ತು ಪಟ್ಟಣಗಳನ್ನು ಏಕರೂಪದ ಬ್ಲಾಕ್‌ಗಳಾಗಿ ವಿಂಗಡಿಸಲಾಗುವುದು. ಎಣಿಕೆಯ ಸಮಯದಲ್ಲಿ ಲೋಪ ಅಥವಾ ಪುನರಾವರ್ತನೆ ಆಗುವುದನ್ನು ತಪ್ಪಿಸಲು ಪ್ರತಿ ಬ್ಲಾಕ್‌ಗೆ ಒಬ್ಬ ಗಣತಿದಾರರನ್ನು ನಿಯೋಜಿಸಲಾಗುವುದು’ ಎಂದು ಹೇಳಿದ್ದಾರೆ. ನಿಯಮಗಳ ಪ್ರಕಾರ ಜಿಲ್ಲೆಗಳು ಉಪ ವಿಭಾಗಗಳು ತಾಲ್ಲೂಕುಗಳು ಮತ್ತು ಪೊಲೀಸ್ ಠಾಣೆಗಳಂತಹ ಆಡಳಿತಾತ್ಮಕ ಪ್ರದೇಶಗಳ ಗಡಿ ಮಿತಿಗಳನ್ನು ಅಂತಿಮಗೊಳಿಸಿದ ಮೂರು ತಿಂಗಳ ನಂತರವೇ ಜನಗಣತಿ ನಡೆಸಬಹುದು. ಜನಗಣತಿ ನಡೆಯುವ ಅವಧಿಯಲ್ಲಿ (2026ರ ಜ.1 ರಿಂದ 2027ರ ಮಾರ್ಚ್ 31ರ ವರೆಗೆ) ಆಡಳಿತಾತ್ಮಕ ಪ್ರದೇಶಗಳ ಗಡಿಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.