ನವದೆಹಲಿ: ಕರ್ತವ್ಯದ ಮೇಲೆ ನೈಜೀರಿಯಾದಲ್ಲಿರುವ ಐವರು ಭಾರತೀಯ ನಾವಿಕರನ್ನು ಕಡಲ್ಗಳ್ಳರು ಅಪಹರಣ ಮಾಡಿದ್ದಾರೆ.

ಈ ವಿಷಯವನ್ನು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು ದೃಢಪಡಿಸಿದ್ದು, ಅಪಹೃತರ ಸುರಕ್ಷಿತ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ನೈಜೀರಿಯಾದಲ್ಲಿನ ಭಾರತದ ರಾಯಭಾರಿ ಅಭಯ್ ಠಾಕೂರ್ ಅವರಿಗೆ ಸೂಚನೆ ನೀಡಿದ್ದಾರೆ.

ಈ ನಾವಿಕರನ್ನು ಎರಡು ವಾರಗಳ ಹಿಂದೆಯೇ ಅಪಹರಣ ಮಾಡಲಾಗಿದೆ ಎಂದು ಹೇಳಲಾಗಿದ್ದು, ಹಲವು ದಿನಗಳಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಅಪಹರಣಗೊಂಡವರ ಕುಟುಂಬಗಳು ತಿಳಿಸಿವೆ.

‘ಎಂ.ಟಿ ಅಪೇಕಸ್ ಹಡಗಿನಿಂದ ನನ್ನ ಪತಿ ಸುದೀಪ್‌ಕುಮಾರ ಚೌಧರಿ ಅವರನ್ನು ಅಪಹರಿಸಲಾಗಿದೆ’ ಎಂದು ಚೌಧರಿ ಪತ್ನಿ ಭಾಗಶ್ರೀ ದಾಸ್ ಟ್ವಿಟ್ಟರ್ ಮೂಲಕ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮಾಹಿತಿ ನೀಡಿದ್ದಾರೆ.

ಈ ನಡುವೆ, ‘ನೈಜೀರಿಯಾ ನೌಕಾಪಡೆ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಸತತ ಸಂಪರ್ಕದಲ್ಲಿದ್ದು, ಅಪಕರಣಕಾರರೊಂದಿಗೂ ಸಂಪರ್ಕ ಸಾಧಿಸಲಾಗಿದೆ’ ಎಂದು ನೈಜೀರಿಯಾದಲ್ಲಿನ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.