ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರೋಫೈಟರ್ ವಿಮಾನದಲ್ಲಿ ಐಎಎಫ್ ಮುಖ್ಯಸ್ಥರ ಹಾರಾಟ 

Published 8 ಜೂನ್ 2024, 23:52 IST
Last Updated 8 ಜೂನ್ 2024, 23:52 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ವಾಯುಪಡೆ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಶುಕ್ರವಾರ ಜರ್ಮನಿಯ ವಾಯುನೆಲೆಯಲ್ಲಿ ಯುರೋಫೈಟರ್ ವಿಮಾನದಲ್ಲಿ ಹಾರಾಟ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏರ್ ಚೀಫ್ ಮಾರ್ಷಲ್ ಚೌಧರಿ ಪ್ರಸ್ತುತ ಜರ್ಮನಿ ಪ್ರವಾಸದಲ್ಲಿದ್ದು, ಐಎಎಫ್ ಅವರ ಅಧಿಕೃತ ಭೇಟಿಯ ಕೆಲವು ಚಿತ್ರಗಳನ್ನು ಸಹ ಪೋಸ್ಟ್ ಮಾಡಿದೆ.

ಸಿಎಎಸ್ ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ ಅವರು ಜರ್ಮನ್ ವಾಯು ಪಡೆಯ ಆಹ್ವಾನದ ಮೇರೆಗೆ ಜರ್ಮನಿಗೆ ಅಧಿಕೃತ ಭೇಟಿಯಲ್ಲಿದ್ದಾರೆ. ಪ್ರವಾಸದ ಸಮಯದಲ್ಲಿ ಸಿಎಎಸ್, ಐಎಲ್ಎ 2024ಗೆ ಭೇಟಿ ನೀಡಿತು ಮತ್ತು ಜರ್ಮನ್ ವಾಯುನೆಲೆಯಲ್ಲಿ ಯೂರೋಫೈಟರ್ ಟೈಫೂನ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು ಎಂದು ಐಎಎಫ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT