ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಆದರ್ಶಗಳನ್ನು ಪಾಲಿಸಿ: ಮೋದಿ, ಅಮಿತ್ ಶಾಗೆ ಸೋನಮ್‌ ವಾಂಗ್‌ಚುಕ್‌ ಸಂದೇಶ

Published 26 ಮಾರ್ಚ್ 2024, 10:12 IST
Last Updated 26 ಮಾರ್ಚ್ 2024, 10:12 IST
ಅಕ್ಷರ ಗಾತ್ರ

ಲೇಹ್‌(ಲಡಾಖ್‌): ಭಗವಾನ್ ಶ್ರೀರಾಮ ಮತ್ತು ಹಿಂದೂ ವೈಷ್ಣವರ ಆದರ್ಶಗಳನ್ನು ಪಾಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಲಡಾಖ್‌ ಜನರಿಗೆ ನೀಡಿದ ಭರವಸೆಗಳನ್ನು ಪೂರೈಸಲಿ ಎಂದು ಹವಾಮಾನ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ಆಗ್ರಹಿಸಿದರು.

ಲಡಾಕ್‌ಗೆ ರಾಜ್ಯಸ್ಥಾನಕ್ಕೆ ಆಗ್ರಹಿಸಿ ಸೋನಮ್‌ ವಾಂಗ್‌ಚುಕ್‌ ಅವರು ಅಮರಣಾಂತ ಉಪವಾಸ ಕೈಗೊಂಡು ಇಂದಿಗೆ 21 ದಿನಗಳು ಕಳೆದಿವೆ. ಈ ಬಗ್ಗೆ ಎಕ್ಸ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಅವರು ಚುನಾವಣೆ ವೇಳೆ ಏನು ಭರವಸೆ ನೀಡಿದ್ದಿರೋ ಅದನ್ನು ಪೂರೈಸಲಿ ಎಂದು ಹೇಳಿದರು.

‘ನಾನು ಎರಡು ಸಂದೇಶಗಳನ್ನು ಕಳುಹಿಸಲು ಬಯಸುತ್ತೇನೆ. ಒಂದು ಪ್ರಧಾನಿ ಮೋದಿ ಅವರಿಗೆ, ಇನ್ನೊಂದು ಗೃಹ ಸಚಿವ ಅಮಿತ್ ಶಾ ಅವರಿಗೆ. ಸಂದರ್ಶನವೊಂದರಲ್ಲಿ ಅಮಿತ್ ಶಾ ಅವರು ನಾನು ಜೈನ ಅಲ್ಲ, ಹಿಂದೂ ವೈಷ್ಣವ ಎಂದು ಹೇಳಿಕೊಂಡಿದ್ದಾರೆ. ಹಿಂದೂ ವೈಷ್ಣವರ ಬಗ್ಗೆ ವಿಭಿನ್ನ ವ್ಯಾಖ್ಯಾನಗಳು ಇರಬಹುದು. ಆದರೆ, ಅದರಲ್ಲಿ ನಾನು ಇಷ್ಟಪಟ್ಟಿರುವ ಒಂದು ವಾಖ್ಯಾನವೆಂದರೆ, 'ವೈಷ್ಣವನಾದವನು, ಇತರರ ನೋವನ್ನು ತಿಳಿದಿರುತ್ತಾನೆ, ಇತರರಿಗೆ ಒಳ್ಳೆಯದನ್ನು ಮಾಡುತ್ತಾನೆ, ತನ್ನೊಳಗೆ ಅಹಂ ಪ್ರವೇಶಿಸಲು ಬಿಡುವುದಿಲ್ಲ’ ಎಂದು ವಾಂಗ್‌ಚುಕ್ ಹೇಳಿದರು.

‘ರಾಮ ಭಕ್ತ ಮೋದಿ ರಾಮನಿಗಾಗಿ ರಾಮಮಂದಿರವನ್ನು ನಿರ್ಮಿಸಿದ್ದಾರೆ. ಆದರೆ ರಾಮನ ಆರ್ದಶಗಳೇನು? ತಂದೆಗೆ ನೀಡಿದ ವಚನ ಪಾಲಿಸುವುದಕ್ಕೋಸ್ಕರ ಶ್ರೀರಾಮ 14 ವರ್ಷ ವನವಾಸಕ್ಕೆ ತೆರಳಿದನು ಎಂದು ರಾಮಚರಿತ್ರೆಯಲ್ಲಿ ಓದಿದ್ದೇನೆ. ರಾಮಭಕ್ತ ಮೋದಿ, ಹಿಂದೂ ವೈಷ್ಣವರಾದ ಅಮಿತ್ ಶಾ ಲಡಾಕ್ ಜನರಿಗೆ ನೀಡಿದ ಭರವಸೆಗಳನ್ನು ಪೂರೈಸಲಿ’ ಎಂದರು.

‘ನಿನ್ನೆ ನಡೆದ ಪ್ರತಿಭಟನೆಯಲ್ಲಿ 2,500 ಜನ ಭಾಗವಹಿಸಿದ್ದಾರೆ. ಈ 21 ದಿನಗಳಲ್ಲಿ, ಲೇಹ್ ಮತ್ತು ಕಾರ್ಗಿಲ್‌ನಲ್ಲಿ ಸುಮಾರು 60,000 ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು’ ಎಂದು ಇದೇ ವೇಳೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT