ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತವು ಜಾರವ ಸಮುದಾಯಕ್ಕೆ ಸೇರಿದ 19 ಮಂದಿಗೆ ಇದೇ ಮೊದಲ ಬಾರಿಗೆ ಮತದಾರರ ಗುರುತಿನ ಪತ್ರ ನೀಡಿದೆ.

ಈ ಐತಿಹಾಸಿಕ ನಡೆಯಿಂದಾಗಿ, ಹೊರಜಗತ್ತಿನಿಂದ ಪ್ರತ್ಯೇಕವಾಗಿಯೇ ಉಳಿದಿದ್ದ ಹಾಗೂ ಆಕ್ರಮಣಕಾರಿ ಪ್ರವೃತ್ತಿಯ ಈ ಬುಡಕಟ್ಟು ಜನರು ತಮ್ಮ ಹಕ್ಕು ಚಲಾಯಿಸುವ ಅವಕಾಶ ಪಡೆದಂತಾಗಿದೆ.

ದಕ್ಷಿಣ ಅಂಡಮಾನ್ ಜಿಲ್ಲೆಯ ಜಿರ್ಕಾಟಾಂಗ್ ವಸತಿ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಚಂದ್ರಭೂಷಣ್ ಕುಮಾರ್ ಅವರು ಜಾರವ ಸಮುದಾಯದ ಜನರಿಗೆ ಮತದಾರರ ಗುರುತಿನ ಪತ್ರ ವಿತರಿಸಿದ್ದಾರೆ.

‘ಜಾರವ ಸಮುದಾಯದ ವಿಶಿಷ್ಟ ಗುರುತು ಹಾಗೂ ಅವರ ಖಾಸಗಿತನವನ್ನು ಸಂರಕ್ಷಿಸುವುದಕ್ಕಾಗಿ ನಾವು ಸಮಗ್ರ ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದು ದಕ್ಷಿಣ ಅಂಡಮಾನ್ ಜಿಲ್ಲೆಯ ಚುನಾವಣಾ ಅಧಿಕಾರಿ ಅರ್ಜುನ್ ಶರ್ಮಾ ತಿಳಿಸಿದ್ದಾರೆ.

‘ಈ ಸಮುದಾಯದವರ ನೋಂದಣಿ ಪ್ರಕ್ರಿಯೆ ವೇಳೆ, ಅವರ ದೈನಂದಿನ ಚಟುವಟಿಕೆಗಳಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಈ ಕಾರ್ಯ ಸಾಧನೆಯಲ್ಲಿ, ಅಂಡಮಾನ್ ಆದಿಮ ಜನಜಾತಿ ವಿಕಾಸ ಸಮಿತಿ (ಎಎಜೆವಿಎಸ್) ಮಹತ್ವದ ಪಾತ್ರ ವಹಿಸಿದೆ.

ಇದು ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯ ಹೆಗ್ಗುರುತು. ಒಳಗೊಳ್ಳುವಿಕೆ ಹಾಗೂ ಸಮಾನತೆ ಕುರಿತು ದೇಶ ಹೊಂದಿರುವ ಬದ್ಧತೆಯನ್ನು ಈ ನಡೆ ತೋರಿಸುತ್ತದೆ
ಅರ್ಜುನ್ ಶರ್ಮಾ ದಕ್ಷಿಣ ಅಂಡಮಾನ್ ಜಿಲ್ಲೆಯ ಚುನಾವಣಾ ಅಧಿಕಾರಿ

ಅರೆಅಲೆಮಾರಿಗಳು;ಮುಖ್ಯವಾಹಿನಿಂದಲೂ ದೂರ

ಅಂಡಮಾನಿನ ಮೂಲನಿವಾಸಿಗಳಾದ ಜಾರವಾ ಬುಡಕಟ್ಟು ಜನರು ಅರೆ ಅಲೆಮಾರಿಗಳು. ನಿಸರ್ಗದೊಂದಿಗೆ ಆಳವಾದ ನಂಟು ಹೊಂದಿರುವ ಇವರು ಹೊರ ಜಗತ್ತಿನ ಸಂಪರ್ಕದಿಂದ ದೂರವೇ ಉಳಿದವರು. ಅವರ ಸಾಂಸ್ಕೃತಿಕ ಪದ್ಧತಿಗಳು ಹಾಗೂ ಸಂಪ್ರದಾಯಗಳು ಕೂಡ ವಿಶಿಷ್ಟ. ದಕ್ಷಿಣ ಮತ್ತು ಮಧ್ಯ ಅಂಡಮಾನ್ನ ಪಶ್ಷಿಮ ಕರಾವಳಿಯಲ್ಲಿ ವಾಸಿಸುತ್ತಾರೆ. 1996ರ ಏಪ್ರಿಲ್ನಲ್ಲಿ ಹೊರಜಗತ್ತಿನೊಂದಿಗೆ ಜಾರವಾ ಜನರ ಮೊಟ್ಟ ಮೊದಲ ಸಂಪರ್ಕ ಸಾಧ್ಯವಾಯಿತು. ಜಾರವಾ ಬುಡಕಟ್ಟು ವ್ಯಕ್ತಿ 21 ವರ್ಷದ ಎನ್ಮೈ ಅವರ ಎಡ ಪಾದದ ಮೂಳೆ ಮುರಿದ ಸಂದರ್ಭದಲ್ಲಿ ಜಿಲ್ಲಾಡಳಿತ ಅವರಿಗೆ ಚಿಕಿತ್ಸೆ ಒದಗಿಸಿತ್ತು. ‘ಚಿಕಿತ್ಸೆ ನಂತರ ಎನ್ಮೈ ಅವರು ಸುರಕ್ಷಿತವಾಗಿ ತಮ್ಮ ವಾಸಸ್ಥಾನಕ್ಕೆ ಮರಳಿದ್ದರು. ಜಾರವಾ ಸಮುದಾಯ ಮತ್ತು ಜಿಲ್ಲಾಡಳಿತದ ಮಧ್ಯೆ ಪರಸ್ಪರ ನಂಬಿಕೆ ಮೂಡಿಸುವಲ್ಲಿ ಈ ಘಟನೆ ಮಹತ್ವದ ಪಾತ್ರವಹಿಸಿತ್ತು’ ಎಂದು ದಕ್ಷಿಣ ಅಂಡಮಾನ್ ಜಿಲ್ಲೆಯ ಚುನಾವಣಾ ಅಧಿಕಾರಿ ಅರ್ಜುನ್ ಶರ್ಮಾ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.