ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಲಂಡನ್ನ ಬೀದಿಗಳಲ್ಲಿ ಓಡಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಲಂಡನ್ನಲ್ಲಿ ಉಳಿದುಕೊಂಡಿರುವ ಈ ದಂಪತಿ ಬಿಡುವಿನ ವೇಳೆಯಲ್ಲಿ ಸಾಮಾನ್ಯರಂತೆ ಅಡ್ಡಾಡುತ್ತಿರುವುದು ಕಂಡು ಬಂದಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಈ ದಂಪತಿಯು ಸ್ಥಳೀಯರೊಂದಿಗೆ ಮಾತನಾಡುತ್ತಿರುವುದು ಸೆರೆಯಾಗಿದೆ. ಕೊಹ್ಲಿ ಕೈಯಲ್ಲಿ ಕೊಡೆ, ಸಣ್ಣದೊಂದು ನೀರಿನ ಕ್ಯಾನ್ ಹಿಡಿದಿರುವುದನ್ನು ಮತ್ತು ಅನುಷ್ಕಾ, ಬ್ಯಾಗ್ ಹಾಕಿಕೊಂಡಿರುವುದನ್ನು ಕಾಣಬಹುದಾಗಿದೆ.

ವಿರಾಟ್ ಹಾಗೂ ಅನುಷ್ಕಾ ಅವರಿಗೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಆದಾಗ್ಯೂ ಈ ಇಬ್ಬರು ಸಾಮಾನ್ಯರಂತೆ ಓಡಾಡುತ್ತಿರುವುದನ್ನು ಕಂಡ ನೆಟ್ಟಿಗರು 'ಸರಳತೆ'ಯನ್ನು ಕೊಂಡಾಡಿದ್ದಾರೆ.

ಟೆಸ್ಟ್ ಮತ್ತು ಟಿ20 ಕ್ರಿಕೆಟ್ಗೆ ವಿದಾಯ ಹೇಳಿರುವ ಕೊಹ್ಲಿ, ಸದ್ಯ ಏಕದಿನ ಮಾದರಿ ಹಾಗೂ ಐಪಿಎಲ್ನಲ್ಲಷ್ಟೇ ಅಡುತ್ತಿದ್ದಾರೆ. ಅವರು 2008ರ ಇದೇ ದಿನ (ಆಗಸ್ಟ್ 18) ಅಂತರರಾಷ್ಟ್ರೀ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅವರ ಜೆರ್ಸಿ ನಂ. ಕೂಡ 18 ಎಂಬುದು ವಿಶೇಷ.
.ಕೊಹ್ಲಿ ODIಗೆ ಪದಾರ್ಪಣೆ ಮಾಡಿದ್ದು ಇದೇ ದಿನ: ಮೊದಲ ಪಂದ್ಯದಲ್ಲಿ ಗಳಿಸಿದ್ದೆಷ್ಟು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.