ನವದೆಹಲಿ: ‘ವಿದೇಶಿ ಗಣ್ಯರಿಗೆ ತಮ್ಮನ್ನು ಭೇಟಿಯಾಗಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ’ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಆರೋಪವನ್ನು ಬಿಜೆಪಿ ಸಾರಾಸಗಟಾಗಿ ಅಲ್ಲಗಳೆದಿದ್ದು, ಇದು ‘ಹಸಿ ಸುಳ್ಳು’ ಎಂದು ಹೇಳಿದೆ.

‘ರಾಹುಲ್ ಗಾಂಧಿ ಅವರು ಈ ವರ್ಷ ನ್ಯೂಜಿಲೆಂಡ್ ಮತ್ತು ಮಾರಿಷಸ್ ಪ್ರಧಾನಿ ಸೇರಿದಂತೆ ಹಲವು ವಿದೇಶಿ ಅತಿಥಿಗಳನ್ನು ಭೇಟಿಯಾಗಿದ್ದಾರೆ. ಸಾಮಾನ್ಯವಾಗಿ ವಿದೇಶಿ ಗಣ್ಯರು ಭಾರತಕ್ಕೆ ಬಂದಾಗ, ವಿದೇಶಾಂಗ ಸಚಿವಾಲಯವು ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೊಂದಿಗೆ ಅವರ ಸಭೆಗಳನ್ನು ಆಯೋಜಿಸುತ್ತದೆ. ಸರ್ಕಾರದ ಕಾರ್ಯಕ್ರಮಗಳ ಹೊರತಾಗಿ ಹೊರಗಿನ ಸಂಸ್ಥೆ, ವ್ಯಕ್ತಿಗಳ ಭೇಟಿ– ಸಭೆಯನ್ನು ನಿಗದಿಪಡಿಸುವುದು, ಬಂದಿರುವ ವಿದೇಶಿ ಗಣ್ಯರು ಅಥವಾ ಆ ನಿಯೋಗವನ್ನು ಅವಲಂಬಿಸಿರುತ್ತದೆ’ ಎಂದು ಬಿಜೆಪಿಯ ಮುಖ್ಯ ವಕ್ತಾರ ಅನಿಲ್ ಬಲುನಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಾಂಗ್ಲಾದೇಶ, ವಿಯಟ್ನಾಂ ಸೇರಿದಂತೆ ಹಲವು ವಿದೇಶಿ ಗಣ್ಯರನ್ನು ರಾಹುಲ್ ಭೇಟಿ ಮಾಡುತ್ತಿರುವ ಚಿತ್ರಗಳನ್ನೂ ಬಲುನಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ‘ನೀವು ವಿದೇಶಿ ನೆಲದಲ್ಲಿ ಇದ್ದಾಗಲೆಲ್ಲ, ದೇಶದ ಸಂವಿಧಾನ, ಪ್ರಜಾಪ್ರಭುತ್ವ ಸೇರಿ ಭಾರತದ ವರ್ಚಸ್ಸು ಕಡಿಮೆ ಮಾಡುವ ಕೆಲಸ ಮಾಡುತ್ತೀರಿ’ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿದೇಶಿ ಗಣ್ಯರು ಭಾರತಕ್ಕೆ ಬಂದಾಗ, ವಿರೋಧ ಪಕ್ಷದ ಮುಖಂಡನನ್ನು ಭೇಟಿಯಾಗುವುದು ಸಂಪ್ರದಾಯ. ಆದರೆ, ಪ್ರಧಾನಿ ಮತ್ತು ವಿದೇಶಾಂಗ ಸಚಿವಾಲಯ ಈ ನಿಯಮ ಪಾಲಿಸುತ್ತಿಲ್ಲ. ಬಿಜೆಪಿಯು ಅಭದ್ರತೆಯಿಂದ ವಿದೇಶಿ ಗಣ್ಯರಿಗೆ ವಿರೋಧ ಪಕ್ಷದ ಮುಖಂಡನನ್ನು ಭೇಟಿ ಮಾಡಬೇಡಿ ಎಂದು ಹೇಳುತ್ತಿದೆ’ ರಾಹುಲ್ ಗಾಂಧಿ ಇತ್ತೀಚೆಗೆ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.