ವಸತಿ ಯೋಜನೆಗೆ ಯೋಜನಾ ಅನುಮತಿ ನೀಡಲು ರಿಯಲ್ ಎಸ್ಟೇಟ್ ಕಂಪನಿಯೊಂದರಿಂದ ವೈತಿಲಿಂಗಂ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಉಚ್ಚಾಟಿತರಾದ ಬಳಿಕ ಪನ್ನೀರ್‌ಸೆಲ್ವಂ ಅವರಿಗೆ ನಿಷ್ಠರಾಗಿರುವ ವೈತಿಲಿಂಗಂ, ಅವರ ಮಕ್ಕಳು ಮತ್ತು ಶ್ರೀರಾಂ ಪ್ರಾಪರ್ಟೀಸ್ ಎಂಬ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ. ವಸತಿ ಸಮುಚ್ಚಯಕ್ಕೆ ಯೋಜನಾ ಅನುಮತಿ ಪಡೆಯಲು ಶ್ರೀರಾಂ ಪ್ರಾಪರ್ಟೀಸ್ ಕಂಪನಿಯು ₹27.9 ಕೋಟಿ ಹಣವನ್ನು ವೈತಿಲಿಂಗಂ ಅವರ ಅಜ್ಞಾತ ಕಂಪನಿಯಾದ ಮುತ್ತಮ್ಮಲ್ ಎಸ್ಟೇಟ್ಸ್‌ಗೆ ರವಾನಿಸಿತ್ತು ಎಂದು ಆರೋಪಿಸಲಾಗಿದೆ.