ನವದೆಹಲಿ: ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಮಂಗಳವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಂಬ ಸಮೇತ ಭೇಟಿಯಾದರು.

ಈ ಕುರಿತ ಫೋಟೊಗಳನ್ನು ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಭೇಟಿಯ ವೇಳೆ ರಿಷಿ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಇಬ್ಬರು ಮಕ್ಕಳು ಹಾಗೂ ರಿಷಿ ಅವರ ಅತ್ತೆ ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಹಾಜರಿದ್ದರು.

ರಿಷಿ ಸುನಕ್ ಅವರು ಭಾರತದ ಬಹುದೊಡ್ಡ ಗೆಳೆಯ. ಅವರನ್ನು ಭೇಟಿಯಾದ ಸಂದರ್ಭದಲ್ಲಿ ಬ್ರಿಟನ್–ಭಾರತದ ಬಗೆಗಿನ ಗಹನ ವಿಚಾರಗಳನ್ನು ಚರ್ಚಿಸಲಾಯಿತು. ಉಭಯ ದೇಶಗಳ ನಡುವಿನ ಸಂಬಂಧದ ಬಗ್ಗೆ ರಿಷಿ ಅವರಿಗೆ ಅಪಾರ ಆಸಕ್ತಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಇತ್ತೀಚಿನ ಬ್ರಿಟನ್ ಸಾರ್ವತ್ರಿಕ ಚುನಾವಣೆಯ ನಂತರ ರಿಷಿ ಸುನಕ್ ಅವರು ಕುಟುಂಬ ಸಮೇತ ಭಾರತ ಪ್ರವಾಸ ಕೈಗೊಂಡಿದ್ದಾರೆ. ಹಲವು ನಾಯಕರನ್ನು ವೈಯಕ್ತಿಕವಾಗಿ ಭೇಟಿಯಾಗುತ್ತಿರುವುದಲ್ಲದೇ ಭಾರತದ ಹಲವು ಪ್ರಸಿದ್ಧ ಪ್ರವಾಸಿ ಹಾಗೂ ಯಾತ್ರಾ ಸ್ಥಳಗಳನ್ನು ಸಂದರ್ಶನ ಮಾಡುತ್ತಿದ್ದಾರೆ.
.PHOTOS: ಪತ್ನಿ, ಮಕ್ಕಳು, ಅತ್ತೆಯೊಂದಿಗೆ ತಾಜ್ಮಹಲ್ಗೆ ಭೇಟಿ ನೀಡಿದ ರಿಷಿ ಸುನಕ್.Chhatrapati Shivaji Jayanti 2025: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ನುಡಿನಮನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.