ಕೋಲ್ಕತ್ತ: ಇಲ್ಲಿನ ಖಾಸಗಿ ಕಾಲೇಜೊಂದರ ಪ್ರವೇಶಾತಿಯ ಮೆರಿಟ್ ಲಿಸ್ಟ್‌ನಲ್ಲಿ ಮಾಜಿ ನೀಲಿತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಸರು ಕಾಣಿಸಿಕೊಂಡಿದೆ!

ಬಿ.ಎ. ಆನರ್ಸ್ ಪದವಿಯ ಪ್ರವೇಶಾತಿ ಲಿಸ್ಟ್‌ನಲ್ಲಿ ನೋಂದಣಿ ಸಂಖ್ಯೆಯ ಸಮೇತವಾಗಿ ಸನ್ನಿ ಹೆಸರು ಕಾಣಿಸಿಕೊಂಡಿದೆ. ಒಟ್ಟು 157 ಸ್ಥಾನಗಳ ಪೈಕಿ ಸನ್ನಿ ಲಿಯೊನ್ 151 ಸ್ಥಾನದಲ್ಲಿ ಸೇರ್ಪಡೆಯಾಗಿದ್ದಾರೆ ಎಂದು ಕಾಲೇಜಿನ ನೋಟಿಸ್ ಬೋರ್ಡ್‌ನಲ್ಲಿ ಮೆರಿಟ್ ಲಿಸ್ಟ್ ಹಾಕಲಾಗಿದೆ.

ಯಾರೋ ಕಿಡಿಗೇಡಿಗಳು ತೃಣಮೂಲ ಛತ್ರಾ ಕಾಲೇಜಿನ ಹೆಸರು ಕೆಡಿಸುವ ಸಲುವಾಗಿ ನಕಲಿ ಮೆರಿಟ್ ಲಿಸ್ಟ್ ಅಂಟಿಸಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ಆರೋಪಿಸಿದೆ. ಘಟನೆ ಕುರಿತಂತೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಇದೇ ರೀತಿಯ ಮತ್ತೊಂದು ಘಟನೆ ಜರುಗಿದ್ದು ಇಂಗ್ಲಿಷ್ ಆನರ್ಸ್ ಪದವಿ ಪಡೆದವರು ಪಟ್ಟಿಯಲ್ಲಿ ಸನ್ನಿ ಲಿಯೋನ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಮಾಜಿ ನೀಲಿತಾರೆ ಮಿಯಾ ಖಲೀಫಾ, ನೀಲಿ ತಾರೆ ಡ್ಯಾನಿ ಡೇನಿಯಲ್ ಅವರ ಹೆಸರು ಕೂಡ ಪಟ್ಟಿಯಲ್ಲಿ ಸೇರಿಕೊಂಡಿದೆ.

ಇಲ್ಲಿನ ಬರಸಾತ್ ಸರ್ಕಾರಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಪ್ರಾಂಶುಪಾಲರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಳೆದೊಂದು ವಾರದಲ್ಲಿ ಇಂತಹ ಎರಡು ಘಟನೆಗಳು ಜರುಗಿವೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.