ನವದೆಹಲಿ: ದೇಶದ ಜನರಿಗೆ 78ನೇ ಸ್ವಾತಂತ್ರ್ಯ ದಿನದ ಶುಭಾಶಯ ತಿಳಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಸ್ವಾತಂತ್ರ್ಯ ನಮ್ಮ ಅತಿದೊಡ್ಡ ರಕ್ಷಣಾ ಕವಚವಾಗಿದೆ ’ ಎಂದರು.
ಸ್ವಾತಂತ್ರ್ಯ ದಿನದ ಶುಭಾಶಯ ತಿಳಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸ್ವಾತಂತ್ರ್ಯ ಎಂದರೆ ಕೇವಲ ಒಂದು ಪದವಲ್ಲ , ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಅತಿದೊಡ್ಡ ರಕ್ಷಣಾ ಕವಚ’ ಎಂದು ಹೇಳಿದರು.
‘ಸ್ವಾತಂತ್ರ್ಯ ಎನ್ನುವುದು ಅಭಿವ್ಯಕ್ತಿಯ ಶಕ್ತಿಯಾಗಿದ್ದು, ಸತ್ಯವನ್ನು ಮಾತನಾಡುವ ಸಾಮರ್ಥ್ಯ ಮತ್ತು ಕನಸುಗಳನ್ನು ನನಸಾಗಿಸುವ ಭರವಸೆಯಾಗಿದೆ’ ಎಂದರು.
ಇಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು. ಆ ಮೂಲಕ ದಶಕದ ಬಳಿಕ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ ವಿರೋಧ ಪಕ್ಷದ ಮೊದಲ ನಾಯಕ ಎನಿಸಿದ್ದಾರೆ.