ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಧಾನಿ ಮೋದಿ ಸಚಿವ ಸಂಪುಟ: ವಕೀಲರಿಂದ ಎಂಬಿಎ ಪದವೀಧರರ ವರೆಗೆ...

Published 10 ಜೂನ್ 2024, 11:18 IST
Last Updated 10 ಜೂನ್ 2024, 11:18 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿರುವ 30 ಮಂದಿ ಸಂಪುಟ ದರ್ಜೆ ಸಚಿವರ ಪೈಕಿ, ಆರು ಮಂದಿ ವಕೀಲರು, ಮೂವರು ಎಂಬಿಎ ಪದವೀಧರರು ಹಾಗೂ ಹತ್ತು ಜನ ಸ್ನಾತಕೋತ್ತರ ಪದವೀಧರರು.

ರಾಜನಾಥ್ ಸಿಂಗ್‌, ಶಿವರಾಜ್‌ ಸಿಂಗ್‌ ಚೌಹಾಣ್‌, ನಿರ್ಮಲಾ ಸೀತಾರಾಮನ್‌, ಎಸ್‌.ಜೈಶಂಕರ್‌, ಧರ್ಮೇಂದ್ರ ಪ್ರಧಾನ್‌, ಡಾ.ವೀರೇಂದ್ರ ಕುಮಾರ್‌, ಮನಸುಖ್‌ ಮಾಂಡವೀಯ, ಹರದೀಪ್‌ ಸಿಂಗ್‌ ಪುರಿ, ಅನ್ನಪೂರ್ಣಾ ದೇವಿ ಹಾಗೂ ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಪ್ರಧಾನಿ ಮೋದಿ ಅವರೂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.

ನಿತಿನ್‌ ಗಡ್ಕರಿ, ಜೆ.ಪಿ.ನಡ್ಡಾ, ಪಿಯೂಷ್‌ ಗೋಯಲ್‌, ಸರ್ಬಾನಂದ ಸೋನವಾಲ್‌, ಭೂಪೇಂದ್ರ ಯಾದವ್‌ ಮತ್ತು ಕಿರಣ್‌ ರಿಜುಜು ಅವರು ವೃತ್ತಿಯಿಂದ ವಕೀಲರಾಗಿದ್ದಾರೆ.

ಮನೋಹರ್‌ ಲಾಲ್‌ ಖಟ್ಟರ್‌, ಎಚ್‌.ಡಿ.ಕುಮಾರಸ್ವಾಮಿ, ಜೀತನ್‌ ರಾಮ್‌ ಮಾಂಝಿ, ಲಲನ್‌ ಸಿಂಗ್‌, ಪ್ರಲ್ಹಾದ ಜೋಶಿ ಮತ್ತು ಗಿರಿರಾಜ್‌ ಸಿಂಗ್‌ ಪದವಿ ವರೆಗೆ ಓದಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 72 ಸಚಿವರು ರಾಷ್ಟ್ರಪತಿ ಭವನದಲ್ಲಿ ಭಾನುವಾರ ರಾತ್ರಿ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಮಾಜಿ ಮುಖ್ಯಮಂತ್ರಿಗಳಾಗಿರುವ ಕರ್ನಾಟಕದ ಕುಮಾರಸ್ವಾಮಿ, ಮಧ್ಯಪ್ರದೇಶದ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ಹರಿಯಾಣದ ಖಟ್ಟರ್‌ ಸೇರಿದಂತೆ 33 ಮಂದಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದಾರೆ. ಕೇರಳ ಲೋಕಸಭಾ ಕ್ಷೇತ್ರವೊಂದರಲ್ಲಿ ಬಿಜೆಪಿಗೆ ಮೊದಲ ಗೆಲುವು ತಂದುಕೊಟ್ಟಿರುವ ಸುರೇಶ್‌ ಗೋಪಿ ಅವರೂ ಮೋದಿ ಸಂಪುಟಕ್ಕೆ ಸೇರಿದ್ದಾರೆ. ಆದರೆ, ಅವರು ತಮಗೆ ಸಚಿವ ಸ್ಥಾನ ಬೇಡ ಎಂಬುದಾಗಿ ವರಿಷ್ಠರಿಗೆ ತಿಳಿಸಿದ್ದಾರೆ.

ಕೇಂದ್ರ ಸಚಿವ ಸಂಪುಟವು ಗರಿಷ್ಠ 81 ಸದಸ್ಯರನ್ನು ಹೊಂದಬಹುದಾಗಿದೆ. ಸದ್ಯ ಎನ್‌ಡಿಎ ಸರ್ಕಾರದ ಸಂಪುಟದಲ್ಲಿ ಪ್ರಧಾನಿಯೂ ಸೇರಿದಂತೆ 72 ಮಂದಿ ಸಚಿವರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT