ನವದೆಹಲಿ: ಜಿ–20 ಶೃಂಗಸಭೆಗೆ ರಾಷ್ಟ್ರ ರಾಜಧಾನಿ ದೆಹಲಿ ಸಜ್ಜುಗೊಂಡಿದ್ದರೆ, ಮತ್ತೊಂದೆಡೆ ವಿದೇಶಗಳ ಗಣ್ಯರು ನೆನಪಿನಲ್ಲಿಡುವಂತಹ ಆತಿಥ್ಯ ನೀಡಲು ನಗರದ ಐಷಾರಾಮಿ ಹೋಟೆಲ್‌ಗಳು ಸಿದ್ಧತೆ ಮಾಡಿಕೊಂಡಿವೆ.
‘ದೇಶದ ಸಾಂಪ್ರದಾಯಿಕ ಕಲೆ, ಸಂಸ್ಕೃತಿ ಹಾಗೂ ಆತಿಥ್ಯ ಪ್ರದರ್ಶನಕ್ಕೆ ಈ ಶೃಂಗಸಭೆ ನಮಗೆ ದೊಡ್ಡ ಅವಕಾಶವನ್ನು ಒದಗಿಸಿದೆ’ ಎಂದು ಲಿ ಮೆರಿಡಿಯನ್ ಹೋಟೆಲ್‌ನ ಉಪಾಧ್ಯಕ್ಷೆ ಹಾಗೂ ಪ್ರಧಾನ ವ್ಯವಸ್ಥಾಪಕಿ ಮೀನಾ ಭಾಟಿಯಾ ಹೇಳುತ್ತಾರೆ.
‘ಮೊಗಲರು ಹಾಗೂ ರಾಜವಂಶಗಳು ಬಳಸುತ್ತಿದ್ದ ತಹರೇವಾರಿ ಖಾದ್ಯಗಳು ಗಣ್ಯರ ಔತಣದ ಪಟ್ಟಿಯಲ್ಲಿವೆ’ ಎಂದು ಹೇಳಿದ್ದಾರೆ.
ಬಿಹಾರದ ಲಿಟ್ಟಿ ಚೋಖಾ, ರಾಜಸ್ಥಾನದ ಗಟ್ಟಾ ಕರಿ, ಕಾಶ್ಮೀರದ ಕೇಸರಿ ಕೂರ್ಮ, ಲಖನೌದ ನಲ್ಲಿ ನಿಹಾರಿ, ಕೇರಳದ ಮೀನ್ ಪೊಳ್ಳಿಚ್ಚದ್,ಗೋವಾದ ಚಿಕನ್ ಶಾಕುಟಿ ಮಸಾಲ ಹಾಗೂ ಪಶ್ಚಿಮ ಬಂಗಾಳದ ಚಿಂಗ್ರಿ ಮಲೈ ಕರಿ ಸೇರಿದಂತೆ ಅನೇಕ ಭಕ್ಷ್ಯಗಳು ರಾಜಧಾನಿಯ ವಿವಿಧ ಹೋಟೆಲ್‌ಗಳ ಮೆನುವಿನಲ್ಲಿವೆ.
‘ಷಿ ಭಾಗಿ– ಖಚಿತವಿಲ್ಲ’: ಜಿ–20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಪಾಲ್ಗೊಳ್ಳುವುದು ಇನ್ನೂ ಖಚಿತವಾಗಿಲ್ಲ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು ಪಾಲ್ಗೊಳ್ಳುತ್ತಿಲ್ಲ. ಉಳಿದಂತೆ 16 ಮಂದಿ ವಿಶ್ವ ನಾಯಕರು ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.