ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿಯರಿಗೆ ವಂಶವಾಹಿ ಪರೀಕ್ಷೆ ಕಡ್ಡಾಯ!

ಮಕ್ಕಳಲ್ಲಿ ಆನುವಂಶಿಕ ಕಾಯಿಲೆ ನಿಯಂತ್ರಣಕ್ಕೆ ಹೊಸ ನೀತಿ
Last Updated 22 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಮಕ್ಕಳಲ್ಲಿ ಆನುವಂಶಿಕ ಕಾಯಿಲೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗರ್ಭಿಣಿಯರಿಗೆ ವಂಶವಾಹಿ ಪರೀಕ್ಷೆ ಕಡ್ಡಾಯಗೊಳಿಸುವ ಹೊಸ ಕರಡು ನೀತಿಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ.

ಗರ್ಭಿಣಿಯರ ವಂಶವಾಹಿ ಪರೀಕ್ಷೆಯಿಂದ ಥಲಸ್ಸೆಮಿಯಾ (ರಕ್ತ ಸಂಬಂಧಿ ಕಾಯಿಲೆ), ಕುಡುಗೋಲು ಕಣ ರಕ್ತಹೀನತೆಯಂತಹ ಆನುವಂಶಿಕ ಕಾಯಿಲೆಗಳನ್ನು ಪತ್ತೆ ಹಚ್ಚಬಹುದು.

ವಂಶವಾಹಿ ಅಥವಾ ವರ್ಣತಂತುಗ ಳಿಂದಾಗಿ ಗರ್ಭಿಣಿಯರಲ್ಲಿ ಕಂಡುಬರುವ ಆನುವಂಶಿಕ ಕಾಯಿಲೆಗಳು ಹುಟ್ಟುವ ಮಕ್ಕಳಿಗೂ ಬರದಂತೆ ತಡೆಯುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ.

ಆನುವಂಶಿಕ ಕಾಯಿಲೆ ಇರುವ ಬಡ ಗರ್ಭಿಣಿಯರಿಗೆ ಉಚಿತ ಔಷಧೋಪಚಾರದ ಜತೆಗೆ ಎಲ್ಲ ಅಗತ್ಯ ವೈದ್ಯಕೀಯ ನೆರವು ದೊರೆಯಲಿದೆ.

ರೋಗಿಗಳಿಗೆ ಚಿಕಿತ್ಸಾ ವೆಚ್ಚ ಕಡಿತಗೊಳಿಸಲು ದೇಶೀಯವಾಗಿ ತಯಾರಿಸುವ ರಕ್ತ ಪರಿಶೋಧಕ, ದ್ರಾವಕ ಪಂಪು ಮತ್ತು ಔಷಧಗಳಿಗೆ ಜಿಎಸ್‌ಟಿ ಮತ್ತು ಕಸ್ಟಮ್‌ ಸುಂಕ ವಿನಾಯಿತಿ ನೀಡುವಂತೆ ಕರಡು ನೀತಿಯಲ್ಲಿ ಶಿಫಾರಸು ಮಾಡಲಾಗಿದೆ.

* ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಕರಡು ಪಟ್ಟಿ

* ಪ್ರತಿಕ್ರಿಯೆ ಸಲ್ಲಿಸಲು ಆಗಸ್ಟ್‌ 30ರವರೆಗೆ ಕಾಲಾವಕಾಶ

*ಪತಿ, ಪತ್ನಿ ಇಬ್ಬರಿಗೂ ವಂಶವಾಹಿ ಪರೀಕ್ಷೆ ಕಡ್ಡಾಯ

* ಪ್ರೌಢಶಾಲೆ ಮತ್ತು ಕಾಲೇಜು ಹಂತದಲ್ಲಿಯೇ ವಂಶವಾಹಿ ಪರೀಕ್ಷೆಗೆ ಶಿಫಾರಸು

* ಎಚ್‌ಪಿಎಲ್‌ಸಿ ವಿಶ್ಲೇಷಣೆ ಮೂಲಕ ಕೆಂಪುರಕ್ತ ಕಣ, ಎಬ್‌ಬಿ ಎ2 ಮತ್ತು ಹಿಮೊಗ್ಲೋಬಿನ್‌ ಪರೀಕ್ಷೆ

* ತಪಾಸಣೆಗೆ ಒಳಗಾದವರಿಗೆ ರಿಪೋರ್ಟ್‌ ಕಾರ್ಡ್‌

* ಎಲ್ಲ ರಾಜ್ಯಗಳಲ್ಲೂ ಅತ್ಯಾಧುನಿಕ ತಪಾಸಣಾ ಕೇಂದ್ರ ಮತ್ತು ಅಸ್ಥಿಮಜ್ಜೆ ಕಸಿ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT